alex Certify
ಕನ್ನಡ ದುನಿಯಾ       Mobile App
       

Kannada Duniya

ದುನಿಯಾ ವಿಜಯ್ ಕಳುಹಿಸಿಕೊಟ್ಟ ಚೀಟಿ ನೋಡಿ ಕಣ್ಣೀರಿಟ್ಟ ಪತ್ನಿ

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ.

ತಾವು ಜೈಲಿಗೆ ಬಂದ ಬಳಿಕ ಕುಟುಂಬಸ್ಥರಾಗಲಿ ಅಥವಾ ಚಿತ್ರರಂಗದವರಾಗಲಿ ಆಗಮಿಸದಿರುವುದಕ್ಕೆ ಜೈಲಾಧಿಕಾರಿಗಳ ಮುಂದೆ ತಮ್ಮ ಬೇಸರ ವ್ಯಕ್ತಪಡಿಸಿದ್ದ ದುನಿಯಾ ವಿಜಯ್, ಇಂದು ಪತ್ನಿ ನಾಗರತ್ನ ತಮ್ಮ ಭೇಟಿಗೆ ಬಂದ ವೇಳೆ ಅವರನ್ನು ನೋಡಲು ನಿರಾಕರಿಸಿದ್ದಾರೆ.

ಅಷ್ಟೇ ಅಲ್ಲ, ಜೈಲು ಸಿಬ್ಬಂದಿ ಬಳಿ ನಿನ್ನನ್ನು ನೋಡಲು ನನಗೆ ಇಷ್ಟ ಇಲ್ಲವೆಂದು ದುನಿಯಾ ವಿಜಯ್, ಚೀಟಿ ಕಳುಹಿಸಿದ್ದಾರೆ ಎಂದು ಹೇಳಲಾಗಿದ್ದು, ಇದನ್ನು ನೋಡುತ್ತಲೇ ನಾಗರತ್ನ ಕಣ್ಣೀರಿಟ್ಟಿದ್ದಾರೆ.

ದುನಿಯಾ ವಿಜಯ್ ಬಂಧನದ ಬಳಿಕ ಅವರ ದ್ವಿತೀಯ ಪತ್ನಿ ಕೀರ್ತಿ ಗೌಡರ ಮನೆಗೆ ತೆರಳಿದ್ದ ನಾಗರತ್ನ, ಗಲಾಟೆ ಮಾಡಿಕೊಂಡಿದ್ದರು. ಅಲ್ಲದೆ ಕೀರ್ತಿ ಗೌಡರ ವಿರುದ್ಧ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದರು. ಜೊತೆಗೆ ಮಾಧ್ಯಮಗಳ ಮುಂದೆ ದುನಿಯಾ ವಿಜಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪತ್ನಿ ನಾಗರತ್ನರನ್ನು ಭೇಟಿಯಾಗಲು ದುನಿಯಾ ವಿಜಯ್ ನಿರಾಕರಿಸಿದ್ದಾರೆಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...