alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆ ಮುಂದೆ ನಟ ದುನಿಯಾ ವಿಜಯ್ ಗೆ ಡಿಚ್ಚಿ

ಜಿಮ್ ಟ್ರೈನರ್ ಮಾರುತಿ ಎಂಬವರ ಕಿಡ್ನಾಪ್ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದುನಿಯಾ ವಿಜಯ್ ಮತ್ತವರ ಸಹಚರರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದ ವೇಳೆ ಅಲ್ಲಿ ಹೈಡ್ರಾಮಾವೇ ನಡೆದಿದೆ.

ಮಾರುತಿ ಅವರ ಮೇಲೆ ಹಲ್ಲೆ ನಡೆಸಿದ್ದ ದುನಿಯಾ ವಿಜಯ್, ಮಣಿ, ಪ್ರಸಾದ್ ಮತ್ತಿತರರನ್ನು ಪೊಲೀಸರು ಠಾಣೆಗೆ ಕರೆ ತಂದ ವೇಳೆ ಅಲ್ಲಿ ಜಮಾಯಿಸಿದ್ದ ಪಾನಿಪುರಿ ಕಿಟ್ಟಿ ಮತ್ತಿತರರು ದುನಿಯಾ ವಿಜಯ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಪೊಲೀಸರ ಮುಂದೆಯೇ ದುನಿಯಾ ವಿಜಯ್ ಅವರಿಗೆ ಡಿಚ್ಚಿ ಹೊಡೆಯಲು ಯತ್ನಿಸಲಾಗಿದೆ.

ಪ್ರಸಾದ್ ಹಾಗೂ ಪಾನಿಪುರಿ ಕಿಟ್ಟಿ ನಡುವೆ ಹಳೆ ದ್ವೇಷವಿತ್ತೆಂದು ಹೇಳಲಾಗಿದ್ದು, ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ವೀಕ್ಷಿಸಲು ಪ್ರಸಾದ್ ಜೊತೆ ಬಂದಿದ್ದ ದುನಿಯಾ ವಿಜಯ್, ಪಾನಿಪುರಿ ಕಿಟ್ಟಿ ಅಣ್ಣನ ಪುತ್ರ ಮಾರುತಿ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ. ದುನಿಯಾ ವಿಜಿ ಮತ್ತವರ ಸ್ನೇಹಿತರು ಈ ಸಂದರ್ಭದಲ್ಲಿ ಪಾನಮತ್ತರಾಗಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...