alex Certify
ಕನ್ನಡ ದುನಿಯಾ       Mobile App
       

Kannada Duniya

ಪರಪ್ಪನ ಅಗ್ರಹಾರದಲ್ಲಿ ಚಡಪಡಿಸಿದ ದುನಿಯಾ ವಿಜಯ್

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಪಾಲಾಗಿರುವ ನಟ ದುನಿಯಾ ವಿಜಯ್, ತಮ್ಮನ್ನು ಕಾಣಲು ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಯಾರೊಬ್ಬರೂ ಬಾರದ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿದ್ದಾರೆನ್ನಲಾಗಿದೆ.

ದುನಿಯಾ ವಿಜಯ್ ಮತ್ತವರ ಸಹಚರರನ್ನು ಭಾನುವಾರ ರಾತ್ರಿ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೀಗಾಗಿ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಗಿದ್ದು, ಈ ಸಂದರ್ಭದಲ್ಲಿ ದುನಿಯಾ ವಿಜಯ್ ಅವರನ್ನು ಕಾಣಲು ಯಾರೊಬ್ಬರೂ ಭೇಟಿ ನೀಡಿಲ್ಲ. ವಿಜಯ್ ಅವರ ದ್ವಿತೀಯ ಪತ್ನಿ ಮತ್ತು ಕೆಲ ಸ್ನೇಹಿತರು ಭೇಟಿ ನೀಡಿದ್ದರಾದರೂ ಚಿತ್ರರಂಗದ ಮಂದಿ ಬಾರದಿರುವುದು ದುನಿಯಾ ವಿಜಯ್ ಅವರನ್ನು ಬೇಸರಕ್ಕೀಡು ಮಾಡಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...