alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯಪಾನ ಮಾಡಿದ ಮಹಿಳಾ ಪೈಲಟ್, ಆಗಿದ್ದೇನು…?

ಮಂಗಳೂರು: ಸ್ಪೈಸ್ ಜೆಟ್ ವಿಮಾನದ ಮಹಿಳಾ ಪೈಲಟ್ ಅತಿಯಾಗಿ ಮದ್ಯಪಾನ ಮಾಡಿದ ಕಾರಣ, ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನ ವಿಳಂಬವಾಗಿದೆ.

ಮಂಗಳವಾರ ಮಧ್ಯರಾತ್ರಿ 180 ಪ್ರಯಾಣಿಕರಿದ್ದ ವಿಮಾನ ಮಂಗಳೂರು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಬೇಕಿತ್ತು. ಮಹಿಳಾ ಪೈಲಟ್ ಕರ್ತವ್ಯಕ್ಕೆ ತೆರಳುವ ಮೊದಲು ವೈದ್ಯಾಧಿಕಾರಿ ತಪಾಸಣೆ ಮಾಡಿದಾಗ, ಅತಿಯಾಗಿ ಮದ್ಯ ಸೇವನೆ ಮಾಡಿರುವುದು ಕಂಡು ಬಂದಿದೆ.

ಇದರಿಂದಾಗಿ ಪ್ರಯಾಣಿಕರು 5 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಾಯುವಂತಾಗಿದೆ. ಬದಲಿ ಪೈಲಟ್ ವ್ಯವಸ್ಥೆ ಮಾಡಿದ ಬಳಿಕ ವಿಮಾನ ಹೊರಟಿದೆ.

ಕೊರೆಂಡನ್ ಏರ್ ಲೈನ್ಸ್ ನ ಮುಖ್ಯ ಪೈಲಟ್ ಸೆಬಾಹತ್ ಉಲ್ಕ್ ಎರ್ಕ್ ಅವರು ಸ್ಪೈಸ್ ಜೆಟ್ ನ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಅವರು ಪಾನಮತ್ತರಾಗಿದ್ದ ಕಾರಣ, ವಿಮಾನ ಚಾಲನೆಗೆ ಅವಕಾಶ ನೀಡಿಲ್ಲ. ಅವರನ್ನು ಸಸ್ಪೆಂಡ್ ಮಾಡಿ ಟರ್ಕಿಗೆ ಕಳುಹಿಸಲಾಗಿದೆ ಎಂದು ಸ್ಪೈಸ್ ಜೆಟ್ ವ್ಯವಸ್ಥಾಪಕ ವಕ್ತಾರರು ತಿಳಿಸಿದ್ದಾರೆ.

ಸ್ಪೈಸ್ ಜೆಟ್ ಕಂಪನಿಯೊಂದಿಗೆ ಟರ್ಕಿಯ ಕೊರೆಂಡನ್ ಕಂಪನಿ ಒಪ್ಪಂದ ಮಾಡಿಕೊಂಡು ಮಂಗಳೂರು–ದುಬೈ ನಡುವೆ 1 ವರ್ಷದಿಂದ ವಿಮಾನಯಾನ ಸೇವೆ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...