alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತು ಇಳಿದ ಮೇಲೆ ಅರಿವಾಗಿತ್ತು ಮಾಡಿದ ತಪ್ಪು

drunk man arrestedಅವರಿಬ್ಬರು ಅತ್ಮೀಯ ಸ್ನೇಹಿತರೇನಲ್ಲ. ಕುಡಿಯಲು ಬಾರ್ ನಲ್ಲಿ ಕುಳಿತಿದ್ದ ವೇಳೆ ಪರಸ್ಪರ ಪರಿಚಯವಾಗಿದೆ. ಅಲ್ಲಿ ಕುಡಿದಿದ್ದು, ಸಾಕಾಗಲಿಲ್ಲವೆಂದು ಮನೆಗೆ ತೆರಳಿ ಮತ್ತೇ ಪಾನಗೋಷ್ಟಿ ನಡೆಸಿದ್ದಾರೆ. ನಂತರ ನಡೆದಿದೆ ಅನಾಹುತ.

ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಸೂರ್ಯ, ತಮಿಳುನಾಡಿನ ತಿರುವನ್ವೇಲಿಯ ಪಾಂಡಿಯನ್ ಗೆ ಕುಡಿದ ಮತ್ತಿನಲ್ಲಿ ತನ್ನ 2 ವರ್ಷದ ಮಗಳನ್ನು ದತ್ತು ಕೊಟ್ಟಿದ್ದಾನೆ. ಮಗುವನ್ನು ಕರೆದುಕೊಂಡು ಹೋದ ಪಾಂಡಿಯನ್ ಗೆ ಕುಡಿದ ಮತ್ತು ಇಳಿದ ಮೇಲೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಮಗುವನ್ನು ತಿರುವನ್ವೇಲಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದು, ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಮಗು ಮರಳಿ ದೊರೆತಿದೆ.

ಸೂರ್ಯ ಹಾಗೂ ಪಾಂಡಿಯನ್ ಕುಡಿಯುತ್ತ ಕುಳಿತಿದ್ದ ವೇಳೆ ಸೂರ್ಯ, ತನಗೆಮೂವರೂ ಹೆಣ್ಣು ಮಕ್ಕಳಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಪಾಂಡಿಯನ್ ತನಗೆ ಗಂಡು ಮಕ್ಕಳಿರುವ ಕಾರಣ ಹೆಣ್ಣು ಮಗು ಇದ್ದರೆ ಸಂತಸಪಡುತ್ತಿದ್ದೆ ಎಂದಿದ್ದಾನೆ. ಕೂಡಲೇ ಸೂರ್ಯ ತನ್ನ ಎರಡು ವರ್ಷದ ಮಗಳನ್ನು ಆತನಿಗೆ ನೀಡಿದ್ದಾನೆ. ಮಗುವನ್ನು ಕರೆದುಕೊಂಡು ತಿರುವನ್ವೇಲಿಗೆ ಹೋದ ಪಾಂಡಿಯನ್ ಮತ್ತು ಇಳಿದ ಮೇಲೆ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಅದೃಷ್ಟವೆನ್ನುವಂತೆ ಮಗು ಅಲ್ಲಿನ ಪೊಲೀಸರಿಗೆ ಸಿಕ್ಕಿದ್ದು, ಮಗುವನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಬಿಟ್ಟಿದ್ದಾರೆ. ಇತ್ತ ಸೂರ್ಯನ ಪತ್ನಿ ಮಗು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ ವೇಳೆ ಪಾಂಡಿಯನ್ ನನ್ನು ಹಿಡಿದು ವಿಚಾರಿಸಿದಾಗ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ವಿಚಾರ ಗೊತ್ತಾಗಿದೆ. ಬಳಿಕ ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಿ ಸೂರ್ಯ ಹಾಗೂ ಪಾಂಡಿಯನ್ ರನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...