alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಚೀನಿ ಮಹಿಳೆ ರಂಪಾಟ

women 3445ಕಂಠಪೂರ್ತಿ ಕುಡಿದಿದ್ದ ಚೀನಿ ಮಹಿಳೆಯೊಬ್ಬಳು ಸಹಾಯಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ನಡು ರಸ್ತೆಯಲ್ಲೇ ರಂಪಾಟ ನಡೆಸಿರುವ ಘಟನೆ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ಚೀನಾದ ಜೆಸ್ಸಿ ಎಂಬಾಕೆ ತನ್ನ ಪತಿ ಪ್ರಶಾಂತ್ ಜೊತೆ ಕಂಠ ಪೂರ್ತಿ ಕುಡಿದು ರಾತ್ರಿ 12-30 ರ ಸಮಯದಲ್ಲಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಬ್ಬನ್ ರಸ್ತೆಯ ಬಿ.ಆರ್.ವಿ. ಜಂಕ್ಷನ್ ಬಳಿ ಆಯತಪ್ಪಿ ಬೈಕ್ ನಿಂದ ಬಿದ್ದಿದ್ದಾರೆ.

ಆ ವೇಳೆ ಸ್ಥಳದಲ್ಲಿದ್ದ ಶಿವಾಜಿ ನಗರ ಸಂಚಾರ ಠಾಣೆಯ ಪೊಲೀಸ್ ಪೇದೆ ಖಾನ್ ಎಂಬವರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಜೆಸ್ಸಿ ಈ ಸಂದರ್ಭದಲ್ಲಿ ಖಾನ್ ಅವರ ಮೇಲೆ ಕೈ ಮಾಡಿದ್ದಲ್ಲದೇ ಅವರ ಜರ್ಕಿನ್ ಹರಿದು ಹಾಕಿದ್ದಾಳೆ. ಜೊತೆಗೆ ನಡುರಸ್ತೆಯಲ್ಲೇ ರಂಪಾಟ ನಡೆಸಿದ್ದಾಳೆ. ಕೊನೆಗೆ ದಂಪತಿಗಳನ್ನು ಬಂಧಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ವಶಕ್ಕೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...