alex Certify
ಕನ್ನಡ ದುನಿಯಾ       Mobile App
       

Kannada Duniya

ನಶೆ ಮಾತ್ರೆ ಮಾರಾಟ ಜಾಲ ಬೇಧಿಸಿದ ಪೊಲೀಸರು

ಬಾಲ್ಕಿ: ಮನೆ ಮುಂದೆ ಬೃಂದಾವನ ಮಾಡೋದೆಲ್ಲ ಅನಾಚಾರ ಎಂಬ ಮಾತು ಈ ವ್ಯಕ್ತಿಗೆ ಹೇಳಿ ಮಾಡಿಸಿದಂತಿದೆ. ಹೌದು. ಮನೆಯ ಅಂಗಳದಲ್ಲಿ ದೇವಾಲಯವನ್ನು ನಿರ್ಮಿಸಿ, ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ಔಷಧ ಮಾರಾಟ ಮಾಡುತ್ತಿದ್ದ ಸಂಜೀವಕುಮಾರ ಜಲ್ದೆ ಎಂಬಾತನನ್ನು ಬಾಲ್ಕಿ ಪಟ್ಟಣದ ಬಸವನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳೇ ಸಂಜೀವ್ ಕುಮಾರ್ ನ ಕಸ್ಟಮರ್ಸ್. ದೇವರ ದರ್ಶನಕ್ಕೆಂದು ಬರುವ ವಿದ್ಯಾರ್ಥಿಗಳು ಸಂಜೀವ್ ಕುಮಾರ್ ಮನೆಗೆ ಬಂದು ನಶೆ ಬರಿಸುವ ಮಾತ್ರೆಗಳನ್ನು ಹೆಚ್ಚಿನ ಹಣ ನೀಡಿ ಖರೀದಿಸುತ್ತಿದ್ದರು. ಹಲವು ವರ್ಷಗಳಿಂದ ಸಂಜೀವ್ ಕುಮಾರ್ ಡ್ರಗ್ಸ್ ಮಾರಾಟವನ್ನೇ ಕಾಯಕ ಮಾಡಿಕೊಂಡಿದ್ದ. ಅದಾಗಲೇ ಸ್ಥಳೀಯ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ತನ್ನ ಕಾಯಕ ನಿಲ್ಲಿಸದ ಸಂಜೀವ ಕುಮಾರ್ ದಂಧೆ ಮುಂದುವರಿಸಿಕೊಂಡು ಹೋಗಿದ್ದ.

ಶುಕ್ರವಾರ ಕಾರ್ಯಾಚರಣೆಗಿಳಿದ ಅಬಕಾರಿ ಅಧಿಕಾರಿಗಳು ಮತ್ತು ಡ್ರಗ್ಸ್‌ ಕಂಟ್ರೋಲ್‌ ಅಧಿಕಾರಿಗಳು ಸಂಜೀವ್ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಮನೆ ಕಾಟ್‌ ಕೆಳಗೆ, ಮನೆ ಪಕ್ಕದ ತೋಟದಲ್ಲಿ ಗಿಡಗಳ ಕೆಳಗೆ ಅಪಾರ ಪ್ರಮಾಣದ ಮಾದಕ ಔಷಧಿಗಳನ್ನು ಈತ ಹುದುಗಿಸಿಟ್ಟಿದ್ದು, ಎಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...