alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಲ್ಮ್ ನೋಡ್ತಾ ಬಸ್ ಚಲಾಯಿಸಿದ ಬಿಎಂಟಿಸಿ ಚಾಲಕ

download

ಕಿಲ್ಲರ್ ಬಿಎಂಟಿಸಿ ಎಂದೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಸರು ಪಡೆದಿದೆ. ಚಾಲಕರ ನಿರ್ಲಕ್ಷ್ಯಕ್ಕೆ ಅನೇಕ ಜೀವಗಳು ಬಲಿಯಾದ ಉದಾಹರಣೆಗಳಿವೆ. ಚಾಲನೆ ಮಾಡುವಾಗ ಮೊಬೈಲ್ ನಿಷಿದ್ಧ. ಆದ್ರೂ ಒಂದು ಕೈನಲ್ಲಿ ಮೊಬೈಲ್ ಇನ್ನೊಂದು ಕೈನಲ್ಲಿ ಬಸ್ ಸ್ಟೇರಿಂಗ್ ಹಿಡಿದು ಚಾಲನೆ ಮಾಡ್ತಿದ್ದಾನೆ ಬಿಎಂಟಿಸಿ ಚಾಲಕ.

ಒಂದು ಕೈನಲ್ಲಿ ಮೊಬೈಲ್ ಹಿಡಿದು ಫಿಲ್ಮ್ ನೋಡ್ತಾ ಬಸ್ ಚಾಲನೆ ಮಾಡ್ತಿರುವ ಚಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಟಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ 271 ಎ ( ಕೆಂಪೇಗೌಡ ಬಸ್ ನಿಲ್ದಾಣದಿಂದ ಅಬ್ಬಿಗೆರೆಗೆ ಹೋಗ್ತಾ ಇದ್ದ ಬಸ್ ಇದಾಗಿದೆ.) ಬಸ್ ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತ ಪ್ರಯಾಣಿಕರು ಚಾಲಕನ ಬೇಜವಾಬ್ದಾರಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಚಾಲಕ ಬಸ್ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವಂತಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಎಂಡಿ ಏಕರೂಪ್ ಕೌರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...