alex Certify
ಕನ್ನಡ ದುನಿಯಾ       Mobile App
       

Kannada Duniya

ATMಗೆ ತುಂಬಿಸಲು ತಂದಿದ್ದ ಹಣದ ಜೊತೆ ಚಾಲಕ ಎಸ್ಕೇಪ್

money-1

ಬೆಂಗಳೂರಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ 92 ಲಕ್ಷ ರೂಪಾಯಿ ಹಣದ ಜೊತೆಗೆ ವಾಹನ ಚಾಲಕ ಪರಾರಿಯಾಗಿದ್ದಾನೆ.

ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಭರ್ತಿ ಮಾಡಲು 1.37 ಕೋಟಿ ರೂಪಾಯಿ ಹಣವನ್ನು ವಾಹನದಲ್ಲಿ ತರಲಾಗಿತ್ತು. ಅದರಲ್ಲಿದ್ದಿದ್ದೆಲ್ಲ ಹೊಸ 500 ರೂಪಾಯಿ ಹಾಗೂ 100 ರೂಪಾಯಿ ನೋಟುಗಳು.

ವಾಹನದಲ್ಲಿ ಬಂದಿದ್ದ ಇಬ್ಬರು ಸಿಬ್ಬಂದಿ ಹತ್ತಿರದ ಬ್ಯಾಂಕ್ ನಲ್ಲಿ ಹಣ ವಿತ್ ಡ್ರಾ ಮಾಡಲು ಹೋಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ತನ್ನ ಗನ್ ಅಲ್ಲೇ ಬಿಟ್ಟು ಮೂತ್ರವಿಸರ್ಜನೆಗೆ ತೆರಳಿದ್ದ. ಈ ವೇಳೆ ವಾಹನದ ಚಾಲಕ ಡೊಮ್ನಿಕ್ ರಾಯ್ 1.37 ಕೋಟಿ ರೂಪಾಯಿ ಹಣದ ಜೊತೆ ಪರಾರಿಯಾಗಿಬಿಟ್ಟಿದ್ದಾನೆ. ನಿನ್ನೆ ಮಧ್ಯಾಹ್ನ 1.30ರ ಸಮಯದಲ್ಲಿ ನಡೆದ ಘಟನೆ ಇದು.

ಇವತ್ತು ನಗರದ ಮೌಂಟ್ ಕಾರ್ಮಲ್ ಕಾಲೇಜಿನ ಬಳಿ ಆ ವಾಹನ ಪತ್ತೆಯಾಗಿದೆ. ವಾಹನದಲ್ಲಿ 45 ಲಕ್ಷ ರೂಪಾಯಿ ಹಾಗೂ ಒಂದು ಗನ್ ಅನ್ನು ಬಿಟ್ಟು ಚಾಲಕ ಡೊಮ್ನಿಕ್, 92 ಲಕ್ಷ ರೂಪಾಯಿ ಹಣದ ಜೊತೆ ಎಸ್ಕೇಪ್ ಆಗಿದ್ದಾನೆ. ಡೊಮ್ನಿಕ್, ಪತ್ನಿ ಮತ್ತು ಮಗನನ್ನು ಕೂಡ ಕರೆದುಕೊಂಡು ಓಡಿ ಹೋಗಿದ್ದಾನೆ. ಆತ ಸೆಕ್ಯೂರ್ ಟ್ರಾನ್ಸಿಟ್ ಕಂಪನಿಯಲ್ಲಿ ವಾಹನ ಚಾಲಕನಾಗಿದ್ದ. ಸದ್ಯ ಪೊಲೀಸರು ಆರೋಪಿ ಡೊಮ್ನಿಕ್ ಗಾಗಿ ಶೋಧ ನಡೆಸುತ್ತಿದ್ದು, ಇದಕ್ಕಾಗಿಯೇ ಚಿಕ್ಕಪೇಟೆ ಎಸಿಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...