alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಅಮಲಿನಲ್ಲಿ ರಸ್ತೆಯಲ್ಲೇ ಯುವತಿಯ ಅವಾಂತರ

Crime-against-Women

ಮದ್ಯದ ಅಮಲು ನೆತ್ತಿಗೇರಿದರೆ ಹೇಗೆಲ್ಲಾ ಆಡುತ್ತಾರೆ ಎಂಬುದನ್ನೇನು ಹೇಳಬೇಕಿಲ್ಲ. ಹೀಗೆ ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಅವಾಂತರ ಸೃಷ್ಠಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೆಹಲಿ ಮೂಲದ ಯುವತಿ ಕುಡಿದು ಕಾರ್ ಚಾಲನೆ ಮಾಡಿ ಸರಣಿ ಅಪಘಾತಕ್ಕೆ ಕಾರಣವಾಗಿದ್ದಾಳೆ.

ತಡರಾತ್ರಿವರೆಗೂ ವೀಕೆಂಡ್ ಪಾರ್ಟಿಯಲ್ಲಿ ಭಾಗವಹಿಸಿದ್ದ ದೆಹಲಿಯ ಯುವತಿ ಅಭಿಲಾಷ ಕಂಠಪೂರ್ತಿ ಕುಡಿದು ಮನೆಗೆ ಹೊರಟಿದ್ದಾಳೆ. ಮದ್ಯದ ಅಮಲಿನಲ್ಲಿ ಸರಿಯಾಗಿ ಕಾರು ಚಾಲನೆ ಮಾಡಲು ಆಕೆಗೆ ಸಾಧ್ಯವಾಗಿಲ್ಲ. ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡುತ್ತಾ ಬಂದಿದ್ದಾಳೆ. ಕಾರಿನಲ್ಲಿ ಈಕೆಯೂ ಸೇರಿದಂತೆ ನಾಲ್ವರು ಇದ್ದು, ಅವರೆಲ್ಲರೂ ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿ ಜೋರಾಗಿ ಕಾರ್ ಚಾಲನೆ ಮಾಡಿಕೊಂಡು ಬಂದ ಅಭಿಲಾಷ ಎದುರಿನಿಂದ ಬಂದ ಕಾರಿಗೆ ಡಿಕ್ಕಿಹೊಡೆಸಿದ್ದಾಳೆ.

ಘಟನೆಯ ನಂತರ ಕಾರ್ ಇಳಿದು ಪರಾರಿಯಾಗಲೆತ್ನಿಸಿದ ಅವರನ್ನು ಹಿಡಿದು ವಿಚಾರಣೆ ನಡೆಸಲಾಗಿದೆ. ಅಭಿಲಾಷ ಮತ್ತು ಆಕೆಯ ಫ್ರೆಂಡ್ ಹಿಮಾಂಶು ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಅಶೋಕನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಸಂದರ್ಭದಲ್ಲಿ ಅಭಿಲಾಷ ಪೊಲೀಸರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾಳೆ. ಜನರೊಂದಿಗೆ ಜಗಳವಾಡಿದ್ದಾಳೆ ಎನ್ನಲಾಗಿದೆ. ಆದರೆ, ಇದನ್ನು ಅಲ್ಲಗಳೆದಿರುವ ಅಭಿಲಾಷ ಮತ್ತು ಹಿಮಾಂಶು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...