alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯರ ಪುತ್ರ ಯತೀಂದ್ರರನ್ನು ಗೆಲ್ಲಿಸಿದ್ದಕ್ಕೆ ಭೂರಿ ಭೋಜನ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾಕ್ಟರ್ ಯತೀಂದ್ರರನ್ನ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೃತಜ್ಞತಾ ಸಮಾರಂಭ ಏರ್ಪಡಿಸಲಾಗಿದೆ.

ಸಮಾರಂಭದ ಬಳಿಕ ಭೂರಿ ಭೋಜನ ಏರ್ಪಡಿಸಲಾಗಿದ್ದು, ಹೋಳಿಗೆ, ಪಾಯಸ, ಪಲ್ಯ, ಕೋಸಂಬರಿ, ಅನ್ನ, ಸಾಂಬಾರ್ ಸೇರಿದಂತೆ ಹತ್ತಾರು ಪದಾರ್ಥಗಳನ್ನು ಸಮಾರಂಭಕ್ಕೆ ಆಗಮಿಸಿದವರಿಗೆ ಬಡಿಸಲಾಗಿದೆ.

ಸುಮಾರು ಆರು ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಕೆಲವು ಮುಖಂಡರಿಗೆ ಸ್ವತಃ ಡಾ. ಯತೀಂದ್ರರೇ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...