alex Certify
ಕನ್ನಡ ದುನಿಯಾ       Mobile App
       

Kannada Duniya

ವರನಟ ಡಾ. ರಾಜ್ ಅಪಹರಣ ಪ್ರಕರಣದ ಆರೋಪಿಗಳ ಖುಲಾಸೆಯಿಂದ ನಾಗಪ್ಪ ಮಾರಡಗಿಗೆ ನಿರಾಸೆ

ವರನಟ ಡಾ. ರಾಜ್ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ, ಆರೋಪಿಗಳನ್ನು ಖುಲಾಸೆಗೊಳಿಸಿರುವುದಕ್ಕೆ ಅಂದು ಅಣ್ಣಾವ್ರುರೊಂದಿಗೆ ಅಪಹರಣಕ್ಕೊಳಗಾಗಿದ್ದ ನಾಗಪ್ಪ ಮಾರಡಗಿ ನಿರಾಸೆ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಸೇರಿದಂತೆ ಹಲವರು ಹದಿನೈದು ಬಾರಿ ತಮಿಳುನಾಡಿನ ಈರೋಡ್ ನ್ಯಾಯಾಲಯಕ್ಕೆ ತೆರಳಿ ಸಾಕ್ಷಿ ಹೇಳಿದ್ದೆವು. ಅಲ್ಲದೆ ಅಪಹರಣ ಮಾಡಿದ ಕೆಲವರನ್ನು ಗುರುತಿಸಿದ್ದೆವು ಎಂದು ಹೇಳಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಪಾರ್ವತಮ್ಮ ರಾಜಕುಮಾರ್ ಅವರಿಗೆ ವಿಚಾರಣೆಯಿಂದ ಖುದ್ದು ಹಾಜರಾತಿಗೆ ವಿನಾಯಿತಿ ನೀಡುವಂತೆ ಕೋರಿದ್ದೆವು. ಹೀಗಾಗಿ ಪೊಲೀಸರು ಬೆಂಗಳೂರಿಗೆ ಬಂದು ಅವರ ಹೇಳಿಕೆ ಪಡೆದಿದ್ದರು ಎಂದು ನಾಗಪ್ಪ ಮಾರಡಗಿ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತಂತೆ ತಮಿಳುನಾಡು ಅಥವಾ ಕರ್ನಾಟಕ ಸರ್ಕಾರಗಳು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕೆಂದು ನಾಗಪ್ಪ ಮಾರಡಗಿ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...