alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರ ಪಠ್ಯದಲ್ಲಿ ‘ನಟ ಸಾರ್ವಭೌಮ’ ರಿಗೆ ನಮನ

dr. raj

ಬೆಳಗಾವಿ ನಮ್ಮದೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಧ್ಯೆ ಮಹಾರಾಷ್ಟ್ರ ಪುಸ್ತಕ ಮಂಡಳಿ, ಗಡಿ ಭಾಗದ ಕನ್ನಡಿಗರಿಗಾಗಿ ಹೊರ ತಂದಿರುವ ಪುಸ್ತಕದಲ್ಲಿ ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಜೀವನ ಚರಿತ್ರೆಯನ್ನು ಪಠ್ಯವನ್ನಾಗಿಸಿ ಶ್ಲಾಘನೆಗೆ ಒಳಗಾಗಿದೆ.

ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ವಿಷಯವನ್ನು ಒಂದು ಮಾಧ್ಯಮವನ್ನಾಗಿ ಓದಿಸುತ್ತಿದ್ದು, ಇವರಿಗಾಗಿ ಹೊರ ತಂದಿರುವ ಎಂಟನೇ ತರಗತಿ ಪುಸ್ತಕದಲ್ಲಿ ‘ನಟ ಸಾರ್ವಭೌಮ’ ಹೆಸರಿನ ಪಠ್ಯದಲ್ಲಿ ಡಾ. ರಾಜ್ ಅವರ ಬದುಕು, ರಂಗಭೂಮಿ, ಕಲಾ ಸೇವೆ, ಬಂದ ಪ್ರಶಸ್ತಿಗಳು ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿಸಿಕೊಡಲಾಗಿದೆ.

ಡಾ. ರಾಜ್ ರಂತಹ ಮೇರು ನಟರಿಗೆ ಮಹಾರಾಷ್ಟ್ರ ಸರ್ಕಾರ ಈ ರೀತಿ ಗೌರವ ನೀಡಿರುವುದು ನಿಜಕ್ಕೂ ಅನುಕರಣೀಯವಾಗಿದೆ. ಡಾ. ರಾಜ್ ಅವರ ಜೀವನ ಚರಿತ್ರೆ ಮಹಾರಾಷ್ಟ್ರ ಪುಸ್ತಕ ಮಂಡಳಿ ತಂದಿರುವ ಪುಸ್ತಕದಲ್ಲಿ ಪಠ್ಯವಾಗಿರುವುದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಇದು ಇತರರಿಗೂ ಮಾದರಿಯಾಗಲಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...