alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧ ಶಂಕೆ: ಡಬ್ಬಲ್ ಮರ್ಡರ್

bdtಅನೈತಿಕ ಸಂಬಂಧ ಶಂಕೆ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿಯಲ್ಲಿ ಕಳೆದ ರಾತ್ರಿ ಡಬ್ಬಲ್ ಮರ್ಡರ್ ನಡೆದಿದೆ. ಶರಾವತಿ, ಸತೀಶ್ ಎಂಬವರ ಹತ್ಯೆಯಾಗಿದ್ದು, ಶರಾವತಿ ಮನೆಯಲ್ಲಿಯೇ ಈ ಕೃತ್ಯ ನಡೆದಿದೆ.

ಪ್ರಕರಣವೊಂದರಲ್ಲಿ ಶರಾವತಿಯ ಪತಿ ಸಿದ್ದೇಗೌಡ ಜೈಲಿನಲ್ಲಿದ್ದು, ಈ ಸಮಯದಲ್ಲಿ ಸತೀಶ್ ಜೊತೆ ಶರಾವತಿ ಅನೈತಿಕ ಸಂಬಂಧ ಹೊಂದಿದ್ದಳೆಂದು ಹೇಳಲಾಗಿದೆ.

ಸತೀಶ್ ಹಾಗೂ ಶರಾವತಿ ಹತ್ತಿರದ ಸಂಬಂಧಿಗಳಾಗಿದ್ದು, ಸಿದ್ದೇಗೌಡ ಜೈಲಿಗೆ ಹೋದ ನಂತರ ಸತೀಶ್, ಅವರಿಗೆ ಸೇರಿದ ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದು ಹೇಳಲಾಗಿದೆ. ಆಗ ಶರಾವತಿ ಹಾಗೂ ಸತೀಶ್ ಮಧ್ಯೆ ಅತ್ಮೀಯತೆ ಬೆಳೆದಿತ್ತೆನ್ನಲಾಗಿದ್ದು, ಕೆಲವರು ಇವರಿಬ್ಬರ ಸಂಬಂಧದ ಕುರಿತು ಮಾತನಾಡಿಕೊಳ್ಳುತ್ತಿದ್ದುದ್ದನ್ನು ಅರಿತ ಸಿದ್ದೇಗೌಡ, ಇನ್ನು ಮುಂದೆ ನಮ್ಮ ಜಮೀನಿನ ಉಸ್ತುವಾರಿ ನೋಡಿಕೊಳ್ಳುವ ಅಗತ್ಯವಿಲ್ಲವೆಂದು ತಾಕೀತು ಮಾಡಿದ್ದನೆನ್ನಲಾಗಿದೆ.

ಆದರೂ ಶರಾವತಿ ಮತ್ತು ಸತೀಶ್ ಅತ್ಮೀಯತೆಯಿಂದ ಇದ್ದು, ಕಳೆದ ರಾತ್ರಿ ಶರಾವತಿ ಮನೆಯಲ್ಲಿ ಸತೀಶ್ ಇದ್ದಾಗಲೇ ಇಬ್ಬರನ್ನೂ ಹತ್ಯೆ ಮಾಡಲಾಗಿದೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...