alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಚಮಚ ಕತ್ತೆ ಹಾಲಿನ ಬೆಲೆ 50 ರೂಪಾಯಿ..!

donkey-milk2

ಈವರೆಗೆ ಹಸು, ಎಮ್ಮೆ ಹಾಗೂ ಮೇಕೆ ಹಾಲುಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗಿರುವುದನ್ನು ಕೇಳಿರ್ತೀರಾ. ಆದ್ರೆ ಕತ್ತೆ ಹಾಲಿಗೂ ಸಿಕ್ಕಾಪಟ್ಟೆ ಬೆಲೆ ಇದೆ. ಬೆಂಗಳೂರಿನಲ್ಲಿ ಒಂದು ಚಮಚ ಕತ್ತೆ ಹಾಲಿನ ಬೆಲೆ ಕೇಳಿದ್ರೆ ಆಶ್ಚರ್ಯವಾಗುತ್ತೆ.

ಬೆಂಗಳೂರಿನಲ್ಲಿ ಒಂದು ಚಮಚ ಕತ್ತೆ ಹಾಲಿಗೆ ಜನರು 50 ರೂಪಾಯಿ ಕೊಡ್ತಿದ್ದಾರೆ. ಕತ್ತೆ ಹಾಲು ಮಾರಾಟ ಮಾಡುವ ಕೋಲಾರದ ಕೃಷ್ಣಪ್ಪ ಇದನ್ನೇ ಫುಲ್ ಟೈಂ ವ್ಯಾಪಾರ ಮಾಡಿಕೊಂಡಿದ್ದಾರೆ. ಕತ್ತೆ ಹಾಲು ನವಜಾತ ಶಿಶುಗಳ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆಯಂತೆ. ಕೆಲವೊಂದು ರೋಗಗಳಿಗೆ ಔಷಧಿಯಾಗಿ ಇದು ಕೆಲಸ ಮಾಡುತ್ತದೆಯಂತೆ.

ರಸ್ತೆಯಲ್ಲಿ  ಕತ್ತೆ, ಲಕ್ಷ್ಮಿ ಜೊತೆ ಹೋಗುವ ಕೃಷ್ಣಪ್ಪ ಕತ್ತೆ ಹಾಲು..ಕತ್ತೆ ಹಾಲು ಎಂದು ಕೂಗುತ್ತ ಹೋಗ್ತಾರೆ. ಅಸ್ತಮಾ, ಶೀತ, ಕೆಮ್ಮಿಗೆ ಉತ್ತಮ ಔಷಧ ಕತ್ತೆ ಹಾಲು. ಮಕ್ಕಳ ಆರೋಗ್ಯಕ್ಕೆ ಉತ್ತಮ ಹಾಲು..ಎಂದು ಕೂಗ್ತಾ ಹೋಗ್ತಾರೆ.

ಕತ್ತೆ ಹಾಲು ಪೌಷ್ಠಿಕ ಗುಣ ಹೊಂದಿದೆ ಎಂಬುದನ್ನು ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ನ ಡೇರಿ ಸೈನ್ಸ್ ವಿಭಾಗದ ಮುಖ್ಯಸ್ಥ ಜಯಪ್ರಕಾಶ್, ಕತ್ತೆ ಹಾಲು ತಾಯಿಯ ಎದೆ ಹಾಲಿಗೆ ಸಮ ಎನ್ನುತ್ತಾರೆ. ಇದರಲ್ಲಿ ಲೈಸೋಝೈಂ ಅಂಶವಿರುತ್ತದೆಯಂತೆ. ಪ್ರತಿರೋಧಕ ಶಕ್ತಿ ಹೆಚ್ಚಿಸಲು ಇದು ಯೋಗ್ಯವಂತೆ. ಆದ್ರೆ ಕತ್ತೆ ಹಾಲಿನ ಉತ್ಪಾದನೆ ಕಡಿಮೆ ಇದ್ದು, ಅದಿನ್ನೂ ವಾಣಿಜ್ಯ ಮಾರಾಟವಾಗಿ ಬದಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...