alex Certify
ಕನ್ನಡ ದುನಿಯಾ       Mobile App
       

Kannada Duniya

ವರುಣದೇವನ ಕೃಪೆಗಾಗಿ ಗ್ರಾಮದಲ್ಲಿ ನಡೀತು ಕತ್ತೆ ಮೆರವಣಿಗೆ

ವಿಜಯಪುರ: ರಾಜ್ಯದ ವಿವಿಧೆಡೆ ಅತಿವೃಷ್ಠಿಯಿಂದ ಅವಾಂತರಗಳು ಸೃಷ್ಠಿಯಾದರೆ ಇನ್ನು ಕೆಲವೆಡೆ ಮಳೆಯೇ ಬಾರದೇ ಬರ ಪರಿಸ್ಥಿತಿ ತಲೆದೋರಿದೆ. ಈ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಹಲವೆಡೆ ಜನರು ವರುಣನ ಕೃಪೆಗಾಗಿ ಪ್ರಾರ್ಥಿಸಿ ಕಪ್ಪೆ ಮದುವೆ, ಕತ್ತೆ ಮೆರವಣಿಗೆಯಂತಹ ವಿಚಿತ್ರವಾದ ಆಚರಣೆಗಳ ಮೊರೆ ಹೋಗಿದ್ದಾರೆ.

ಹೌದು, ವಿಜಯಪುರ ಜಿಲ್ಲೆಯ ಹೊನ್ನೂಟಗಿ ಗ್ರಾಮದಲ್ಲಿ ಮಳೆ ಬಾರದ ಹಿನ್ನಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲೆಂದು ವರುಣದೇವನ ಕೃಪೆಗಾಗಿ ಕತ್ತೆಗೆ ಅಲಂಕಾರ ಮಾಡಿ ಮೆರವಣಿಗೆ ಮಾಡಿದ್ದಾರೆ.

ಒಂದೆಡೆ ಮಣ್ಣಿನಲ್ಲಿ ಪುಟ್ಟದಾದ ಮನೆಯೊಂದನ್ನು ಕಟ್ಟಿ ಅದನ್ನು ತಟ್ಟೆಯ ಮೇಲಿಟ್ಟು ಅದರೊಳಗೊಂದು ಜೀವಂತ ಕಪ್ಪೆಯನ್ನು ಇಟ್ಟು ಮೆರವಣಿಗೆ ಮಾಡಿದರೆ, ಇನ್ನೊಂದೆಡೆ, ಕತ್ತೆಯೊಂದಕ್ಕೆ ಹಸಿರು ಸೀರೆಯನ್ನುಡಿಸಿ, ಹೂಗಳನ್ನು ಮುಡಿಸಿ, ಅಲಂಕರಿಸಿ, ಕತ್ತೆ ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ಗ್ರಾಮದ ಮಹಿಳೆಯರು ಮೆರವಣಿಗೆ ಹೊರಟ ಕತ್ತೆಗೆ ಆರತಿ ಬೆಳಗಿ, ಬರಮಾಡಿಕೊಂಡಿದ್ದಾರೆ.

ಈ ಕಪ್ಪೆ ಹಾಗೂ ಕತ್ತೆಗಳ ವಿಚಿತ್ರ ಮೆರವಣಿಗೆಯಲ್ಲಿ ಇಡೀ ಹೊನ್ನೂಟಗಿ ಗ್ರಾಮದ ರೈತರು, ಮಹಿಳೆಯರು, ಯುವಕರು-ಯುವತಿಯರು, ಮಕ್ಕಳು ಹೀಗೆ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಬರಗಾಲದ ಸಂದರ್ಭದಲ್ಲಿ ಹೀಗೆ ಮೆರವಣಿಗೆ ಮಾಡುವುದರಿಂದ ಮಳೆಯಾಗುತ್ತದೆ ಎಂಬುದು ಈ ಗ್ರಾಮಸ್ಥರ ನಂಬಿಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...