alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವಾನಕ್ಕೆ ನಡೀತು ಭರ್ಜರಿ ಸೀಮಂತ….

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ಮನೆಯ ಓರ್ವ ಸದಸ್ಯನಂತೆಯೇ ನೋಡಿಕೊಳ್ಳುವುದು ವಾಡಿಕೆಯಾಗಿಬಿಟ್ಟಿದೆ. ಅದರಲ್ಲೂ ಸ್ವಾಮಿ ನಿಷ್ಠೆಗೆ ಹೆಸರಾದ ನಾಯಿಗಳ ಮೇಲಂತೂ ಎಲ್ಲಿಲ್ಲದ ಪ್ರೀತಿ. ಇಲ್ಲೊಂದು ಶಾಲೆಯಲ್ಲಿ ಸಾಕುನಾಯಿಗಳಿಗೆ ಗರ್ಬಿಣಿ ಸ್ತ್ರೀಯಯರಿಗೆ ಮಾಡುವಂತೆ ಭರ್ಜರಿ ಸೀಮಂತ ಮಾಡಿ, ಬಂದ ಅತಿಥಿಗಳಿಗೆಲ್ಲ ಅದ್ದೂರಿ ಊಟ ಹಾಕಿಸಿರುವ ಘಟನೆ ನಡೆದಿದೆ.

ಅಚ್ಚರಿ ಎನಿಸಿದರೂ ಇದು ನಿಜ. ಬಳ್ಳಾರಿಯ ವಂದನಾ ಸ್ಕೂಲ್ ನಲ್ಲಿ ಈ ಅದ್ದೂರಿ ಸೀಮಂತ ಕಾರ್ಯಕ್ರಮ ನಡೆದಿದೆ. ಶಾಲೆಯಲ್ಲಿ ಸ್ವೀಟಿ ಹಾಗೂ ಪಂಡೂ ಎಂಬ ಎರಡು ನಾಯಿಗಳನ್ನು ಸಾಕಲಾಗಿದ್ದು, ಗರ್ಭಿಣಿಯಾದ ಈ ಸಾಕುನಾಯಿಗಳಿಗೆ ಮನುಷ್ಯರಿಗೆ ಮಾಡುವಂತೆ ಸೀಮಂತ ನೆರವೇರಿಸಲಾಗಿದೆ.

ಸೀಮಂತ ಕಾರ್ಯಕ್ಕೆ ಬಂದ ನೂರಾರು ಮಹಿಳೆಯರು ಹಾಗೂ ಮಕ್ಕಳು ನಾಯಿಗಳ ಮುಂದೆ ವಿವಿಧ ರೀತಿಯ ಭಕ್ಷ್ಯ-ಭೋಜನಗಳನ್ನು ಇಟ್ಟು ಕುಂಕುಮ ಹಚ್ಚಿ, ಅಲಂಕಾರ ಮಾಡಿ, ಆರತಿ ಬೆಳಗಿ ಹಾರೈಸಿದ್ದಾರೆ. ನಾಯಿ ಸೀಮಂತಕ್ಕೆ ಬಂದ ಎಲ್ಲರಿಗೂ ವಿಶೇಷವಾದ ಭೋಜನ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...