alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಸಂಕಟ ಕಂಡು ಮಮ್ಮಲ ಮರುಗಿದ ಜನ

img-20170124-wa0108

ಶಿವಮೊಗ್ಗ: ಮೃತಪಟ್ಟ ತನ್ನ ಮರಿಗಳ ಎದುರು ರೋಧಿಸುತ್ತಿದ್ದ, ನಾಯಿಯನ್ನು ಕಂಡ ಶಿವಮೊಗ್ಗದ ಜನ ಮಮ್ಮಲ ಮರುಗಿದ್ದಾರೆ.

ಶಿವಮೊಗ್ಗದ ಮಾಡರ್ನ್ ಚಿತ್ರ ಮಂದಿರದ ಸಮೀಪ, ಖಾಲಿ ಜಾಗದಲ್ಲಿ ಇತ್ತೀಚೆಗಷ್ಟೇ ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದ ನಾಯಿಯೊಂದು ಅಲ್ಲೇ ಬೀಡು ಬಿಟ್ಟಿದೆ.

ತನ್ನ ಮರಿಗಳನ್ನು ಅಲ್ಲಿಯೇ ಬಿಟ್ಟು ಆಹಾರ ಹುಡುಕುತ್ತಾ ಹೊರ ಹೋಗಿದ್ದ ನಾಯಿ, ಬರುವಷ್ಟರಲ್ಲಿ ನಾಗರಹಾವೊಂದು ದಾಳಿ ಮಾಡಿದೆ.

ನಾಯಿಯ ಮರಿಗಳನ್ನು ನುಂಗಲು ಯತ್ನಿಸಿ, 6 ಮರಿಗಳನ್ನು ಕಚ್ಚಿ ಸಾಯಿಸಿದೆ. ಸತ್ತು ಬಿದ್ದಿದ್ದ ಮರಿಗಳನ್ನು ಕಂಡ ತಾಯಿ  ಸಂಕಟ ತಡೆಯಲು ಆಗದೇ ಗೋಳಾಡಿದೆ.

ತಾನೇ ಕಾಲಿನಿಂದ ಸಣ್ಣ ಗುಂಡಿ ತೋಡಿ ಮರಿಗಳನ್ನು ಹಾಕಿ ಮಣ್ಣು ಮುಚ್ಚಲು ಯತ್ನಿಸಿದೆ. ನಾಯಿಯ ಸಂಕಟವನ್ನು ಕಂಡ ಜನ ಮರುಗಿದ್ದು, ಹಾವಿನ ಮೇಲೆ ಸಿಟ್ಟು ತೋರಿದ್ದಾರೆ.

ಹಾವು ಹಿಡಿಯುವ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದಾರೆ. ಆದರೆ, ಎಷ್ಟೇ ಹುಡುಕಾಟ ನಡೆಸಿದರೂ ಆ ಜಾಗದಲ್ಲಿ ಹಾವು ಸಿಗಲಿಲ್ಲ.

ನಾಯಿಯ ಸಂಕಟಕ್ಕೆ ಜನ ಮರುಗಿದ್ದಾರೆ. ಮೃತ ಮರಿಗಳ ಅಂತ್ಯ ಸಂಸ್ಕಾರ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...