alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗೆ ಬೈದಿದ್ದಕ್ಕೆ ನಡೆಯಿತು ಕೊಲೆ

dog 33478ತಾನು ಸಾಕಿದ ನಾಯಿಗೆ ವ್ಯಕ್ತಿಯೊಬ್ಬ ಬೈದನೆಂಬ ಕಾರಣಕ್ಕೆ ಸಿಟ್ಟಿಗೆದ್ದವನು ಆತನ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನರನೂರಿನಲ್ಲಿ ನಡೆದಿದೆ.

ಮಾಯಪ್ಪ ಮೇಟಗುಡ್ಡ ಎಂಬಾತನ ಮನೆ ಎದುರಿಗಿದ್ದ ಮಹಾದೇವ ಭಜಂತ್ರಿಯ ನಾಯಿ ಜೋರಾಗಿ ಬೊಗಳುತ್ತಿತ್ತು ಎನ್ನಲಾಗಿದ್ದು, ಮಾಯಪ್ಪ ನಾಯಿ ಹಾಗೂ ಅದರ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದನೆಂದು ಹೇಳಲಾಗಿದೆ.

ಇದರಿಂದ ಕೆರಳಿದ ಮಹಾದೇವ ಭಜಂತ್ರಿ, ಮಾಯಪ್ಪನ ಜೊತೆ ಜಗಳಕ್ಕೆ ನಿಂತಿದ್ದಾನೆ. ಈ ವೇಳೆ ಇಬ್ಬರಿಗೂ ಮಾರಾಮಾರಿ ನಡೆದಿದ್ದು, ಮಹಾದೇವನ ಕುಟುಂಬದವರು ಮಾಯಪ್ಪನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರೆಂದು ಹೇಳಲಾಗಿದೆ. ಇದರಿಂದ ತೀವ್ರ ಗಾಯಗೊಂಡ ಮಾಯಪ್ಪನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆರೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...