alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯರ ಮುಷ್ಕರಕ್ಕೆ ಟ್ವಿಟ್ಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಕೆಪಿಎಂಇ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಹೊರ ರೋಗಿಗಳ ವಿಭಾಗವನ್ನೂ ಬಂದ್ ಮಾಡಿರುವ ಕಾರಣ ರೋಗಿಗಳು ಪರಿತಪಿಸುವಂತಾಗಿದೆ.

ವೈದ್ಯರ ಮುಷ್ಕರದ ಕಾರಣಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಈಗಾಗಲೇ 20 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೈದ್ಯರ ಮುಷ್ಕರ ಕುರಿತಂತೆ ಟ್ವೀಟ್ ಮಾಡಿದ್ದು, ಮುಷ್ಕರ ಕೈ ಬಿಡುವಂತೆ ಮನವಿ ಮಾಡಿದ್ದಾರೆ.

2007 ರ ಕೆಪಿಎಂಇ ಕಾಯ್ದೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ತಿದ್ದುಪಡಿಗಳನ್ನು ಮಾಡಲಾಗಿದೆ. ವಿಧೇಯಕ ಇನ್ನೂ ಮಂಡನೆಯಾಗದಿರುವ ಮಧ್ಯೆ ವೈದ್ಯರು ಮುಷ್ಕರ ಕೈಗೊಂಡಿರುವುದು ಎಷ್ಟು ಸಮಂಜಸ ಎಂದಿರುವ ಮುಖ್ಯಮಂತ್ರಿಗಳು, ಬೆಳಗಾವಿಯಲ್ಲಿ ಈಗಾಗಲೇ ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ರೋಗಿಗಳ ಹಿತದೃಷ್ಟಿಯಿಂದ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಸಂಪೂರ್ಣ ಟ್ವೀಟ್ ಇಲ್ಲಿದೆ.

I met a group of doctors at Belagavi & assured them that govt will hear them before the KPME Bill is introduced again. I appealed to them to withdraw their strike. Yet, the strike is ongoing & continues to put people to inconvenience.

The KPME Act 2007 is already in force. Govt wants to amend the Act of 2007 to provide for a grievance redressal mechanism, price control & a patient’s charter. The amendments are in public interest. However, we are also willing to address the concerns of doctors & hospitals.

When the Bill is not introduced, when we are willing to talk to stakeholders, I am surprised by the unilateral decision of IMA to continue the strike & disrupt healthcare services. Once again, I request IMA to show responsibility, be true to the noble profession & talk to us.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...