alex Certify
ಕನ್ನಡ ದುನಿಯಾ       Mobile App
       

Kannada Duniya

ಮುಷ್ಕರನಿರತ ವೈದ್ಯರಿಗೆ ಹೈಕೋರ್ಟ್ ಖಡಕ್ ಸೂಚನೆ

ಕೆಪಿಎಂಇ ತಿದ್ದುಪಡಿ ವಿಧೇಯಕ ವಿರೋಧಿಸಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರದ ಕಾರಣಕ್ಕೆ ರೋಗಿಗಳು ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಮುಷ್ಕರ ವಾಪಾಸ್ ಪಡೆಯದಿದ್ದರೆ ಸೂಕ್ತ ಆದೇಶ ನೀಡುವುದಾಗಿ ಖಡಕ್ ಸೂಚನೆ ನೀಡಿದೆ.

ವೈದ್ಯರ ಮುಷ್ಕರದ ವಿರುದ್ದ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಐಎಂಎ ಪರ ವಕೀಲರಿಗೆ ಈ ಕುರಿತು ಸೂಚನೆ ನೀಡಿದ ವಿಭಾಗೀಯ ಪೀಠ, ನಿನ್ನೆಯೇ ನಾವು ಮನವಿ ಮಾಡಿದ್ದರೂ ಮುಷ್ಕರ ಮುಂದುವರೆದಿದೆ. ವೈದ್ಯರಿಗೆ ಜನರ ಜೀವಕ್ಕಿಂತ ಮುಖ್ಯವಾದದ್ದು ಏನೂ ಇರಬಾರದು ಎಂದು ಹೇಳಿತು.

ಸಂಜೆಯೊಳಗೆ ಮುಷ್ಕರ ಹಿಂಪಡೆಯುವ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ ಕಠಿಣ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳು ಸಂಜೆ 4-30 ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ಸರ್ಕಾರ ಹಾಗೂ ಐಎಂಎ ಪದಾಧಿಕಾರಿಗಳ ನಡುವೆ ಸಭೆ ಆರಂಭವಾಗಿದ್ದು, ಕೆಲ ಕ್ಷಣದಲ್ಲೇ ತೀರ್ಮಾನ ಹೊರ ಬೀಳುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...