alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯ ಶರತ್ ಕುಮಾರ್ ಹತ್ಯೆ ಪ್ರಕರಣ: ಜಿಮ್ ರವಿ ಸೇರಿ ಏಳು ಜನರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: 2010ರಲ್ಲಿ ನಡೆದ ವೈದ್ಯ ಶರತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಜಿಮ್ ರವಿ ಸೇರಿದಂತೆ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಹಣದ ಆಸೆಗಾಗಿ 2010, ಏ.10ರಂದು ವೈದ್ಯ ಶರತ್ ಕುಮಾರ್ rನ್ನು ಕಿಡ್ನ್ಯಾಪ್ ಮಾಡಿದ ಆರೋಪಿಗಳು 25 ಲಕ್ಷ ರೂ. ಬೇಡಿಕೆಯಿಟ್ಟಿದ್ದರು. ತಕ್ಷಣ ಹಣ ನೀಡದಿದ್ದಾಗ ವೈದ್ಯr ಕುಟುಂಬದಿಂದ ಒಡವೆಗಳನ್ನು ತರಿಸಿಕೊಂಡು, ವೈದ್ಯರನ್ನು ಮನೆಗೆ ಕಳಿಸುವುದಾಗಿ ಹೇಳಿ ಬಳಿಕ ಕುಣಿಗಲ್ ಬಳಿ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ನಂತರ ಶವವನ್ನು ಸುಟ್ಟುಹಾಕಿ, ಮಾಡಿದ ತಪ್ಪಿಗಾಗಿ ಸ್ವಲ್ಪ ಚಿನ್ನವನ್ನು ದೇವರ ಹುಂಡಿಗೆ ತಪ್ಪು ಕಾಣಿಕೆಯಾಗಿ ಹಾಕಿದ್ದರು.

ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಈಗ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ, ತಲಾ 87 ಸಾವಿರ ದಂಡ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ. ಜಿಮ್ ತರಬೇತುದಾರ ರವಿಕುಮಾರ್‌, ಈತನ ಸ್ನೇಹಿತೆ ಸಂಧ್ಯಾ ಅಲಿಯಾಸ್‌ ಸಂಜನಾ, ಅಶ್ವತ್ಥ, ಚೇತನ್‌, ಶಿವಪ್ರತಾಪ್‌, ಭೂಷಿತ್‌ ಹಾಗೂ ಕುಮಾರ್‌ ಶಿಕ್ಷೆಗೆ ಗುರಿಯಾದವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...