alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವ ಡಿ.ಕೆ. ಶಿವಕುಮಾರ್ ಗೆ ಕೆ.ಸಿ. ವೇಣುಗೋಪಾಲ್ ಫುಲ್ ಕ್ಲಾಸ್…?

ಬೆಂಗಳೂರು: ಬೆಳಗಾವಿಯಲ್ಲಿ ಆರಂಭವಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಚಿವ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶವೇ ಕಾರಣ ಎಂಬ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಶಿವಕುಮಾರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಪಕ್ಷದ ಹಿರಿಯ ನಾಯಕರಲ್ಲೇ ಭಿನ್ನಾಭಿಪ್ರಾಯ, ಅಸಮಾಧಾನಗಳು ಮೂಡಲು ಕಾರಣರಾಗುತ್ತೀದ್ದೀರಿ, ನಿಮ್ಮ ಕೆಲಸ ಎಷ್ಟು ಅಷ್ಟನ್ನು ಬಿಟ್ಟು, ಅನಗತ್ಯವಾಗಿ ಬೆಳಗಾವಿ ವಿಚಾರದಲ್ಲಿ ತಲೆ ಹಾಕದಿರುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಪಿ.ಎಲ್.ಡಿ. ಬ್ಯಾಂಕ್ ಚುನಾವಣಾ ವಿಚಾರಕ್ಕೆ ಆರಂಭವಾದ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಬಿಕ್ಕಟ್ಟು, ಕೊನೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿತು. ಪಕ್ಷದ ಹಿರಿಯರಾದ ಜಾರಕಿಹೊಳಿ ಸಹೋದರರನ್ನು ಬಿಟ್ಟು, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೆಚ್ಚಿನ ಬೆಂಬಲ ನೀಡಿ ಹಿರಿಯ ನಾಯಕರಿಗೆ ಅವಮಾನ ಮಾಡಿದಿರಿ. ಬೆಳಗಾವಿ ವಿಷಯದಲ್ಲಿ ನಿಮ್ಮ ಮಧ್ಯ ಪ್ರವೇಶದಿಂದಾಗಿ ಬಿಜೆಪಿಯ ‘ಆಪರೇಷನ್ ಕಮಲ’ಕ್ಕೆ ಅನುಕೂಲ ಆಗಿದೆ. ಈಗ ಬಳ್ಳಾರಿ ಶಾಸಕರು ಬಂಡಾಯ ಏಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕುತ್ತಾಗುತ್ತಿದೆ ಎಂದು ಖಡಕ್ ಆಗಿ ವೇಣುಗೋಪಾಲ್ ಹೇಳಿದ್ದಾರೆ ಎನ್ನಲಾಗಿದೆ.

ಅಲ್ಲದೇ ಬೇರೆ ಪಕ್ಷದವರನ್ನು ನಮ್ಮ ಪಕ್ಷದತ್ತ ಸೆಳೆಯುವ ಬದಲು, ನಮ್ಮ ಪಕ್ಷದ ಹಿರಿಯರಲ್ಲೇ ಅಸಮಾಧಾನಕ್ಕೆ ಕಾರಣವಾಗಿ ನಮ್ಮ ಪಕ್ಷದವರೇ ಬೇರೆ ಪಕ್ಷದತ್ತ ಮುಖ ಮಾಡುವಂತೆ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಡಿಕೆಶಿಯವರನ್ನು ಪ್ರಶ್ನಿಸಿರುವ ವೇಣುಗೋಪಾಲ್, ನಿಮ್ಮ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳುವುದರತ್ತ ಗಮನಕೊಡಿ, ಅನಗತ್ಯವಾಗಿ ಕಾಂಗ್ರೆಸ್​ ಶಾಸಕರು, ಸಚಿವರನ್ನು ಡಿಸ್ಟರ್ಬ್ ಆಗುವಂತೆ ಮಾಡಬೇಡಿ ಎಂದು ಸೂಚಿಸಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...