alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ಕೆ. ಶಿವಕುಮಾರ್ ಹೆಗಲಿಗೆ ಕೆಪಿಸಿಸಿ ಸಾರಥ್ಯ?

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಆರಂಭವಾದ ರಾಜಕೀಯ ಹೈಡ್ರಾಮಾದಲ್ಲಿ ಯಶ ಕಂಡು, ನಂತರ ಯಾವುದೇ ಪ್ರಮುಖ ಅಧಿಕಾರ ಸ್ಥಾನಮಾನ ದೊರಕದೆ ನಿರಾಸೆಗೊಂಡಿದ್ದ ಕಾಂಗ್ರೆಸ್ ನ ಪ್ರಭಾವಿ ಶಾಸಕ, ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರ ಮನವೊಲಿಸುವಲ್ಲಿ ಎಐಸಿಸಿ ನಾಯಕರು ಯಶಸ್ವಿಯಾಗಿದ್ದಾರೆ.

ಸಂದಿಗ್ದ ಪರಿಸ್ಥಿತಿ ತಲೆದೋರಿದ ಸಂದರ್ಭದಲ್ಲಿ ಪಕ್ಷದ ಶಾಸಕರನ್ನು ಹಿಡಿದಿಟ್ಟು, ಪಕ್ಷದ ಮುಂದಾಳುವಿನಂತೆ ಹೋರಾಡಿ, ಇಂದಿನ ಮೈತ್ರಿ ಸರ್ಕಾರ ರಚನೆಗೆ ಕಾರಣರಾಗಿರುವ ಡಿ.ಕೆ. ಶಿವಕುಮಾರ್ ಕಳೆದ ಮೂರು ದಿನಗಳಿಂದ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದರು. ಸಕ್ರಿಯ ಚಟುವಟಿಕೆ ಇಲ್ಲದೆ ದೂರ ಉಳಿದಿದ್ದರು.

ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದ ಹಿಲ್ಟನ್ ಹೋಟೆಲ್ ಕಡೆ ಹೋಗದೆ ಮುನಿಸಿಕೊಂಡಿದ್ದ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭರವಸೆ ಹಾಗೂ ಪ್ರಭಾವಿ ಖಾತೆಯ ಆಶ್ವಾಸನೆ ನೀಡಲಾಗಿದೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ಇಂದು ಸಂಜೆ ಅಥವಾ ನಾಳೆ ಎಐಸಿಸಿ ಘೋಷಿಸುವ ಸಾಧ್ಯತೆಗಳಿವೆ ಮೂಲಗಳು ತಿಳಿಸಿವೆ‌.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...