alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ‘ಕಪ್ಪದ ಡೈರಿ’ಯ ಬಣ್ಣ

dines-g-rao

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಮನೆಯಲ್ಲಿ ಸಿಕ್ಕಿತ್ತೆನ್ನಲಾದ ಡೈರಿಯಲ್ಲಿರುವ ಕೈಬರಹ ಅವರದ್ದಲ್ಲ ಎಂದು ಹೇಳಲಾಗಿದೆ.

ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಡೈರಿಯ ಕುರಿತಾಗಿ ಬಿ.ಜೆ.ಪಿ. ಮಾಡಿದ ಪ್ರಚಾರ ಸುಳ್ಳು ಎಂಬುದು ಗೊತ್ತಾಗಿದೆ. ಇದರಿಂದ ಬಿ.ಜೆ.ಪಿ.ಯವರ ಬಣ್ಣ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಡೈರಿ ಗೋವಿಂದರಾಜ್ ಅವರದ್ದಲ್ಲ. ಅದರಲ್ಲಿದ್ದ ಕೈ ಬರಹವೂ ಅವರದ್ದಲ್ಲ. ಈ ಕುರಿತಾಗಿ ಖ್ಯಾತ ವಿಜ್ಞಾನಿ ಪದ್ಮ ವಿಭೂಷಣ ಡಾ. ಚಂದ್ರಶೇಖರ್ ಪರೀಕ್ಷೆ ನಡೆಸಿ ಫೊರೆನ್ಸಿಕ್ ವರದಿ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

ಪವನ್ ಎಂಬ ವಕೀಲರು ಖಾಸಗಿಯಾಗಿ ಫೊರೆನ್ಸಿಕ್ ಪರೀಕ್ಷೆ ಮಾಡಿಸಿದ್ದು, ಕೈಬರಹ ಗೋವಿಂದರಾಜ್ ಅವರದ್ದಲ್ಲ ಎಂಬುದು ವರದಿಯಲ್ಲಿ ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಐ.ಟಿ. ಇಲಾಖೆ ತನಿಖೆ ನಡೆಸುತ್ತಿದೆ. ಇದನ್ನು ಬಿ.ಜೆ.ಪಿ.ಯವರು ಒಪ್ಪದಿದ್ದರೆ, ಬೇರೆ ಪರೀಕ್ಷೆ ಮಾಡಿಸಲಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...