alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಬೆನ್ನನ್ನೇ ಸುಟ್ಟ ಕಟುಕ ಶಿಕ್ಷಕ

ಹುಬ್ಬಳ್ಳಿ: ಶಿಕ್ಷಕರೊಬ್ಬರು ನಾಲ್ಕು ವರ್ಷದ ಬಾಲಕನ ಬೆನ್ನನ್ನೇ ಸುಟ್ಟ ದಾರುಣ ಘಟನೆ ಹುಬ್ಬಳ್ಳಿಯ ಬಾಲಾಜಿ ಎಜುಕೇಶನ್ ಶಾಲೆಯಲ್ಲಿ ನಡೆದಿದೆ.

ಶ್ರೀನಿವಾಸನಗರದ ಕಾವೇರಿ ಎಂಬ ಮಹಿಳೆಯ ಮಗ ನಾಲ್ಕು ವರ್ಷದ ತ್ರಿಶೂಲ್ ಸುಟ್ಟಗಾಯಗಳಿಂದ ಬಳಲುತ್ತಿದ್ದಾನೆ. ಶಿಕ್ಷಕ ಸತೀಶ ನಾಯ್ಡು ಈ ನೀಚ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಆ. 23 ರಂದು ಎಂದಿನಂತೆ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಾಗ ತ್ರಿಶೂಲ್ ಜ್ವರದಿಂದ ಬಳಲುತ್ತಿದ್ದ. ಆತನ ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನು ಸುಟ್ಟಿದ್ದು ಗೊತ್ತಾಯಿತು. ಆ ಬಗ್ಗೆ ವಿಚಾರಿಸಿದರೆ ಆತ ಮಾತನಾಡುತ್ತಿರಲಿಲ್ಲ. ಆದರೆ ಮರುದಿನ ಆತ ಶಾಲೆಗೆ ಹೋಗಲು ಒಪ್ಪುತ್ತಿರಲಿಲ್ಲ. ಬಲವಂತವಾಗಿ ಆತನನ್ನು ಶಾಲೆಗೆ ಬಿಟ್ಟು ಬರಲಾಗಿತ್ತು. ಸಂಜೆ ಮನೆಗೆ ಬಂದಾಗ ಮತ್ತೆ ಕೇಳಿದರೆ ಶಿಕ್ಷಕ ಸತೀಶ ನಾಯ್ಡು ಬೆನ್ನು ಸುಟ್ಟಿದ್ದಾಗಿ ಬಾಲಕ ಹೇಳಿದ್ದಾನೆ.

ಶಾಲೆಗೆ ಹೋಗಿ ಆ ಬಗ್ಗೆ ವಿಚಾರಿಸಿದರೆ ನಿಮ್ಮ ಮಗನ ಪ್ರವೇಶ ರದ್ದುಪಡಿಸಲಾಗಿದ್ದು, ಬೇರೆ ಶಾಲೆಗೆ ಹೋಗಿ ಎಂಬ ಉದಾಸೀನದ ಉತ್ತರ ಬರುತ್ತಿದೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ಬೇಸರಗೂಂಡ ಮಹಿಳೆ ಕಾವೇರಿ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಾಲೆ ಹಾಗೂ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...