alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್ ಗೆ ಮುಖಭಂಗ

be-dhs-dhsವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿಯವರ ವಿರುದ್ದ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ. ನಿರ್ಣಯದ ವಿರುದ್ದ 37 ಮತಗಳು ಚಲಾವಣೆಗೊಂಡರೆ ನಿರ್ಣಯದ ಪರ 36 ಮತಗಳು ಚಲಾವಣೆಗೊಂಡಿವೆ.

ತಮ್ಮೊಂದಿಗೆ ಸಮಾಲೋಚಿಸದೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ ಎಂದು ಆರೋಪಿಸಿದ್ದ ಜೆಡಿಎಸ್ ಸದಸ್ಯರು ನಿರ್ಣಯದ ವಿರುದ್ದ ಮತ ಚಲಾವಣೆ ಮಾಡಿದ ಕಾರಣ ಡಿ.ಹೆಚ್. ಶಂಕರಮೂರ್ತಿಯವರ ಸ್ಥಾನ ಆಬಾಧಿತವಾಗಿದೆ.

ಕಡೆ ಕ್ಷಣದಲ್ಲಿ ಜೆಡಿಎಸ್ ಬೆಂಬಲ ಪಡೆಯಲು ಯತ್ನಿಸಿದ್ದ ಕಾಂಗ್ರೆಸ್, ಜೆಡಿಎಸ್ ಸದಸ್ಯರಿಗೆ ಸಭಾಪತಿ ಸ್ಥಾನ ನೀಡುವ ಆಫರ್ ನೀಡಿತ್ತು. ಆದರೆ ಇದನ್ನು ತಿರಸ್ಕರಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಈ ಆಫರ್ ಮೂಲಕ ಮನೆ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ಅವಿಶ್ವಾಸ ನಿರ್ಣಯದ ವಿರುದ್ದ ತಮ್ಮ ಸದಸ್ಯರು ಮತ ಚಲಾಯಿಸುವುದಾಗಿ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...