alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದು ಬಜೆಟ್ ನಲ್ಲಿ ಭರಪೂರ ಯೋಜನೆ

sidda

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಕಾರವಾರ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಮಾನ ಇಳಿದಾಣ ನಿರ್ಮಾಣ, ಭಾಗ್ಯಜ್ಯೋತಿ ಯೋಜನೆಯಡಿ ನೀಡುತ್ತಿರುವ ಉಚಿತ ವಿದ್ಯುತ್ ಪ್ರಮಾಣ 18-40 ಯೂನಿಟ್ ಹೆಚ್ಚಳ, ರಾಜ್ಯದ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ. ಸಹಾಯಧನ, 2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ, ಎಲ್ಪಿಜಿ ಆಟೋ ರಿಕ್ಷಾಗಳಿಗೆ 30 ಸಾವಿರ ಸಹಾಯಧನ ನೀಡಲು ಬಜೆಟ್ ನಲ್ಲಿ ತೀರ್ಮಾನಿಸಲಾಗಿದ್ದು, 10 ಲಕ್ಷ ಆಟೋರಿಕ್ಷಾಗಳಿಗೆ ಅನುದಾನ ದೊರೆಯಲಿದೆ.

ರಾಜ್ಯದ 16 ಪ್ರವಾಸಿ ತಾಣಗಳು ವಿಶ್ವದರ್ಜೆಗೆ ಏರಿಸಲಾಗುತ್ತದೆ. ಮೈಸೂರಿನಲ್ಲಿ ಏರೋ ಸ್ಪೋರ್ಟ್ಸ್ ಹಬ್ ಸ್ಥಾಪನೆಗೆ ಯೋಜಿಸಲಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಸರ್ಕಾರ ಬರೆ ಹಾಕಿದ್ದು, 1 ಲಕ್ಷ ಮೇಲ್ಪಟ್ಟ ದ್ವಿಚಕ್ರ ವಾಹನದ ಮೇಲಿನ ತೆರಿಗೆ ಹೆಚ್ಚಳ ಮಾಡಿದೆ. ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸನ್ನು 58 ರಿಂದ 60 ಕ್ಕೆ ಏರಿಕೆ ಮಾಡಲಾಗಿದೆ. ಪರಿಸರ ಸಂರಕ್ಷಣೆಗಾಗಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸ್ಥಾಪಿಸಲು 5 ಕೋಟಿ ರೂಪಾಯಿ ಅನುದಾನ ನೀಡಲಾಗ್ತಿದೆ.

ಗರ್ಭಿಣಿಯರ ಪೌಷ್ಠಿಕಾಂಶ ಕೊರತೆ ನೀಗಿಸಲು ‘ಮಾತೃಪೂರ್ಣ’ ಯೋಜನೆ ಜಾರಿ ಮಾಡುತ್ತಿದ್ದು, ಇದಕ್ಕಾಗಿ 302 ಕೋಟಿ ಅನುದಾನ ನೀಡಲಾಗಿದೆ. ಈ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ ನೀಡಲಾಗುತ್ತದೆ. ಎಸ್ಸಿ/ ಎಸ್ಟಿ ನಿರುದ್ಯೋಗಿಗಳಿಗೆ ವಾಹನ ಖರೀದಿ ಮಾಡಲು 3 ಲಕ್ಷ ರೂ. ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ. ಚಾಲನಾ ಪರವಾನಗಿ ಹೊಂದಿರುವವರಿಗೆ ಅನುದಾನ  ದೊರೆಯಲಿದೆ. ಕೊಳಚೆ ಪ್ರದೇಶದ ನಿವಾಸಿಗಳಿಗೆ ತಿಂಗಳಿಗೆ 10 ಸಾವಿರ ಲೀಟರ್ ಉಚಿತ ಕುಡಿಯುವ ನೀರು ವಿತರಿಸಲಾಗುವುದು.

ರಾಜ್ಯದ 3 ಪಟ್ಟಣಗಳಲ್ಲಿ ಹೊಸ ಆರ್ ಟಿ ಓ ಕಚೇರಿ ಸ್ಥಾಪನೆ, ಪೊಲೀಸ್ ಠಾಣೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಾಯು, ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ, ಆಶಾ ಕಾರ್ಯಕರ್ತರಿಗೆ 1 ಸಾವಿರ ರೂಪಾಯಿ ವಿಶೇಷ ಗೌರವಧನ ನೀಡಲು ಸರ್ಕಾರ ಬಜೆಟ್ ನಲ್ಲಿ ಯೋಜನೆ ಹಾಕಿಕೊಂಡಿದೆ. ಸ್ವಚ್ಛ ಕರ್ನಾಟಕ ನಿರ್ಮಾಣಕ್ಕಾಗಿ ‘ಶೌಚಾಲಯಕ್ಕಾಗಿ ಸಮರ’ ಎಂಬ ಯೋಜನೆ ಅಡಿ 28 ಲಕ್ಷ ಟಾಯ್ಲೆಟ್ ನಿರ್ಮಾಣ ಮಾಡಲಾಗುವುದು.

ಒಲಿಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಹುದ್ದೆ, ಸ್ವರ್ಣ ಪದಕ ವಿಜೇತರಿಗೆ 5 ಕೋಟಿ ಬಹುಮಾನ, ಬೆಳ್ಳಿ ಪದಕ 3 ಕೋಟಿ, ಕಂಚಿನ ಪದಕ ಗೆದ್ದವರಿಗೆ 2 ಕೋಟಿ ಬಹುಮಾನ ನೀಡುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ. ಏಷ್ಯನ್ ಮತ್ತು ಕಾಮನ್ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆ ನೀಡುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ವೃದ್ಧಾಪ್ಯ ವೇತನ 200 ರಿಂದ 500 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, 60-64 ವರ್ಷದವರು ಯೋಜನೆಯ ಲಾಭ ಪಡೆಯಬಹುದು.ಇನ್ನು ಜನಪ್ರತಿನಿಧಿಗಳ ಸಹಾಯಧನವನ್ನು ಕೂಡ ಹೆಚ್ಚಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ನೋಟು ನಿಷೇಧದಿಂದಾಗಿ ತೆರಿಗೆ ಸಂಗ್ರಹ ಕುಂಠಿತವಾಗಿದೆ ಅಂತಾ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...