alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ತಟ್ಟಿದೆ ದೇವೇಗೌಡರ ಖಡಕ್ ಸೂಚನೆಯ ಬಿಸಿ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಸೇರಿದಂತೆ ಪಕ್ಷದ ಸಚಿವರುಗಳಿಗೆ ಕಡ್ಡಾಯವಾಗಿ ಪಕ್ಷದ ಕಚೇರಿಗೆ ಭೇಟಿ ನೀಡುವಂತೆ ಆದೇಶಿಸಿದ್ದು, ಪಕ್ಷದ ಕಾರ್ಯಕರ್ತರುಗಳ ಅಹವಾಲು ಆಲಿಸುವಂತೆ ಸೂಚಿಸಿದ್ದಾರೆ.

ದೇವೇಗೌಡರ ಪರವಾಗಿ ಜೆಡಿಎಸ್ ಬೂತ್ ಸಮಿತಿ ಅಧ್ಯಕ್ಷ ಸುರೇಶ್ ಬಾಬು ಈ ಆದೇಶ ಹೊರಡಿಸಿದ್ದು, ಇದರಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 31 ರ ವರೆಗೆ ಯಾವ್ಯಾವ ಸಚಿವರು ಯಾವ ದಿನ ಭೇಟಿ ನೀಡಬೇಕೆಂದು ವಿವರಿಸಲಾಗಿದೆ.

ಆಗಸ್ಟ್ 1 ರಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ, ಆಗಸ್ಟ್ 2 ರಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಆಗಸ್ಟ್ 9 ರಂದು ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹಾಗೂ ಆಗಸ್ಟ್ 10 ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಕಚೇರಿಗೆ ಭೇಟಿ ನೀಡಬೇಕಿದೆ.

ಆಗಸ್ಟ್ 14ರಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಕಚೇರಿಗೆ ಭೇಟಿ ನೀಡಬೇಕಿದ್ದು, ಇದೇ ರೀತಿ ಸಚಿವರುಗಳಾದ ಎಂ.ಸಿ. ಮನಗೂಳಿ, ಬಂಡೆಪ್ಪ ಕಾಶೆಂಪುರ, ಸಿ.ಎಸ್. ಪುಟ್ಟರಾಜು ಮೊದಲಾದವರ ಭೇಟಿಗೂ ದಿನಾಂಕ ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...