alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಡಾಯ ಶಾಸಕರಿಗೆ ದೇವೇಗೌಡರ ಹಸ್ತಲಾಘವ

hd-devegowdaಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಮಧ್ಯ ಪ್ರವೇಶಿಸಿ ಕರ್ನಾಟಕ ಹಾಗೂ ತಮಿಳುನಾಡಿಗೆ ಸಮ್ಮತವಾಗುವ ಸೂತ್ರ ರೂಪಿಸಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ವಿಧಾನಸೌಧ ಎದುರಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಬೆಳಿಗ್ಗೆ ಬಸವನಗುಡಿಯ ಆಂಜನೇಯ ಸ್ವಾಮಿ ದೇವಾಲಯ, ಕೆ.ಆರ್. ರಸ್ತೆಯ ವೆಂಕಟರಮಣ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಗೌಡರು, ಕಾವೇರಿ ಸಂಕಷ್ಟ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರಲ್ಲದೇ ಬಳಿಕ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉಪವಾಸ ಕುಳಿತಿದ್ದು, ಪಕ್ಷ ಬೇಧವಿಲ್ಲದೆ ಸಚಿವ, ಶಾಸಕರುಗಳು ದೇವೇಗೌಡರನ್ನು ಭೇಟಿ ಮಾಡಿ ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಜೆಡಿಎಸ್ ಬಂಡಾಯ ಶಾಸಕರುಗಳಾದ ಜಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿಯವರುಗಳೂ ಸಹ ಗೌಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆಆಗಮಿಸಿದ್ದು, ಈ ವೇಳೆ ಗೌಡರು ಎದ್ದು ಸ್ವಲ್ಪ ಕಾಲ ಹೊರ ಹೋದರು. ಇದರಿಂದ ಬಂಡಾಯ ಶಾಸಕರು ಇರುಸುಮುರಿಸಿಗೊಳಗಾದರೂ ಸಹ ಬಳಿಕ ವಾಪಾಸ್ ಬಂದ ದೇವೇಗೌಡರು, ಮೂವರೂ ಶಾಸಕರಿಗೆ ಹಸ್ತಲಾಘವ ನೀಡಿ ಕುಶಲೋಪರಿ ವಿಚಾರಿಸಿದರು. ನಂತರ ಗೌಡರು ಕುಳಿತಿದ್ದ ಕುರ್ಚಿಯ ಮುಂದೆ ಸ್ವಲ್ಪ ಕಾಲ ಕುಳಿತಿದ್ದ ಶಾಸಕರುಗಳು ಬೆಂಬಲ ವ್ಯಕ್ತಪಡಿಸಿ ಬಳಿಕ ಅಲ್ಲಿಂದ ತೆರಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...