alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮ್ಯಾನೇಜರ್‌ಗೆ ಮಹಿಳೆ ಗೂಸಾ ಕೊಟ್ಟ ವಿಡಿಯೋ ನೋಡಿದ್ರಾ…?

ಸಾಲ ಮಂಜೂರು ಮಾಡಿಕೊಡಬೇಕಾದರೆ ಮಂಚಕ್ಕೆ ಬರಬೇಕೆಂದು ಕರೆದ ಬ್ಯಾಂಕ್ ಮ್ಯಾನೇಜರ್‌ಗೆ ಬಡಿಗೆ ತೆಗೆದು ಬಡಿದ ಮಹಿಳೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ಘಟನೆ ನಡೆದದ್ದು ದಾವಣಗೆರೆ ನಗರದಲ್ಲಿ.

50 ಸೆಕೆಂಡ್‌ನ ವಿಡಿಯೋದಲ್ಲಿ ಮಹಿಳೆಯೊಬ್ಬಳು ಅಂಗಿ, ಪ್ಯಾಂಟ್ ತೊಟ್ಟು ನೀಟಾಗಿದ್ದ ವ್ಯಕ್ತಿಗೆ ಬಡಿಗೆ, ಚಪ್ಪಲಿಯಿಂದ ಹೊಡೆಯುವುದು, ಕಾಲರ್ ಹಿಡಿದು ದಬಾಯಿಸುವುದು ಕಾಣುತ್ತದೆ. ಪೊಲೀಸ್ ಠಾಣೆಗೆ ಬಾ ಎಂದು ಆಕೆ ಕರೆಯುವುದೂ ಕೇಳುತ್ತದೆ.

ಸೋಮವಾರ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್‌ ಲೋಡ್ ಆಗುತ್ತಿದ್ದಂತೆ ಭಾರೀ ವೈರಲ್ ಆಗಿದೆ. ಮಿ ಟೂ ಅಭಿಯಾನದೊಂದಿಗೆ ಅನೇಕ ಜನರು ಇದನ್ನು ಲಿಂಕ್ ಮಾಡಿದ್ದಾರೆ.

ಇದೇ ವೇಳೆ, ದೀವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿ (ಡಿಎಫ್ಎಚ್ಎಲ್), ಆ ಬ್ಯಾಂಕ್ ಬ್ಯಾನೇಜರ್ ಅನ್ನು ವಜಾ ಮಾಡಿದೆ. ಈ ಘಟನೆ ದುರದೃಷ್ಟಕರ. ತಮ್ಮ ಸಂಸ್ಥೆ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುತ್ತದೆ ಎಂದು ಹೇಳಿಕೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...