alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್‌ಶೋಗೆ ಬೆಂಗಳೂರನ್ನೇ ಪರಿಗಣಿಸಲು‌ ಕಂದಾಯ ಸಚಿವರ ಮನವಿ

ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ರಾಜ್ಯದಲ್ಲಿ ಬಿದ್ದ ಮಳೆಯಿಂದಾಗಿ ಉಂಟಾಗಿರುವ ಬೆಳೆ ನಾಶ ಹಾಗೂ ಕೆಲವೆಡೆ ಬರದ ಪರಿಸ್ಥಿತಿ ಬಗ್ಗೆ ಅವರ ಗಮನಕ್ಕೆ ತಂದು ಕೇಂದ್ರದ ಸಹಕಾರಕ್ಕಾಗಿ‌ ಮನವಿ ಮಾಡಿದ್ದಾರೆ.  ಕೇಂದ್ರ ಸರಕಾರವು ಎಸ್‌ಡಿಆರ್‌ಎಫ್‌ ಅಡಿಯಲ್ಲಿ ರಾಜ್ಯಗಳಿಗೆ ನೀಡುವ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡುವ ಬಗ್ಗೆಯೂ ಚರ್ಚಿಸಿದ್ದಾರೆ.

ಇದೇ ವೇಳೆ ಕರ್ನಾಟಕದಿಂದ ಏರ್‌ ಶೋ ಅನ್ನು ಬೇರೆ ರಾಜ್ಯಕ್ಕೆ ನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಏರೋಸ್ಪೇಸ್‌ ರಾಜಧಾನಿಯಾಗಿ ಹೊರಹೊಮ್ಮಿದೆ. ಹೀಗಿರುವಾಗ ಪ್ರತಿಷ್ಠಿತ ಏರ್‌ ಶೋ ಅನ್ನು ಈ ಬಾರಿ ಕರ್ನಾಟಕದಿಂದ ಸ್ಥಳಾಂತರಿಸಿದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಷ್ಟೆ ಅಲ್ಲದೇ, ಇಂಡಿಯನ್ ಏರೋಸ್ಪೇಸ್‌ ಕೈಗಾರಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಶೇ.65 ರಷ್ಟು ಪ್ರಮಾಣ ಹೂಡಿಕೆ ಕರ್ನಾಟಕದಿಂದಲೇ ಆಕರ್ಷಿಸಿದ್ದೆವು. ಏರೋಸ್ಪೇಸ್‌ ಹಾಗೂ ಸ್ಪೇಸ್‌ಕ್ರಾಫ್ಟ್‌ನಲ್ಲಿ ಕರ್ನಾಟಕದ ಕೊಡುಗೆ ಹೆಚ್ಚು ಎಂದಿದ್ದಾರೆ ಸಚಿವ ದೇಶಪಾಂಡೆ.

ವಿಶ್ವದಲ್ಲೇ ಅತಿ ಮೇಲ್ದರ್ಜೆಯ ಏರೋ‌ಸ್ಪೇಸ್‌ ಪಾರ್ಕ್‌ ಕೂಡ ಶೀಘ್ರವೇ ತಲೆ ಎತ್ತಲಿದೆ. ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ಏರ್‌ ಶೋ ಯಶಸ್ವಿಯಾಗಿ ನಡೆದಿದ್ದು, ಎಲ್ಲರಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ಇಷ್ಟೆಲ್ಲ ವ್ಯವಸ್ಥೆ ಇರುವ ಕರ್ನಾಟಕದಿಂದ ಏರ್‌ಶೋ ಕೈತಪ್ಪಿಸಿದ್ದು ಬೇಸರವಿದೆ. ಹೀಗಾಗಿ ಕೇಂದ್ರ ಸರಕಾರ ಈ ಬಗ್ಗೆ ಮರುಪರಿಶೀಲನೆ ಮಾಡಬೇಕಾಗಿ ಕೇಂದ್ರ ಸಚಿವರೊಂದಿಗೆ ವಿನಂತಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...