alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಡೆಂಘಿ ಪೀಡಿತರ ಸಂಖ್ಯೆ

dengue

ರಾಜ್ಯದಲ್ಲಿ ಡೆಂಘಿ ಹಾವಳಿ ಹೆಚ್ಚಾಗಿದೆ. ಪ್ರತಿದಿನ 717 ಜ್ವರ ಪೀಡಿತರು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಆದ್ರೆ ಅವರಲ್ಲಿ ಡೆಂಘಿ ಪೀಡಿತರ ಸಂಖ್ಯೆ ಎಷ್ಟು ಅನ್ನೋ ನಿಖರ ಮಾಹಿತಿ ಲಭ್ಯವಾಗಿಲ್ಲ. ಜ್ವರ ಪೀಡಿತರ ನೆರವಿಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. 104ಕ್ಕೆ ಕರೆ ಮಾಡಿ ರೋಗಿಗಳು ಅಗತ್ಯ ಸಹಕಾರವನ್ನು ಪಡೆದುಕೊಳ್ಳಬಹುದಾಗಿದೆ.

104ಕ್ಕೆ ಕರೆ ಮಾಡಿ ಶಂಕಿತ ಡೆಂಘಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬಹುದು, ನಿಮ್ಮ ಅಕ್ಕಪಕ್ಕದವರಿಗೆ ಜ್ವರ ಕಾಣಿಸಿಕೊಂಡಿದ್ರೆ ಅದನ್ನು ಕೂಡ ತಿಳಿಸಬಹುದು. ಡೆಂಘಿಯನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೂಡ ಮಾಹಿತಿ ನೀಡಲಾಗುತ್ತದೆ.

ವಿಜಯಪುರ, ಕಲಬುರ್ಗಿ ಮತ್ತು ಚಿತ್ರದುರ್ಗದಲ್ಲಿ ಅತಿ ಹೆಚ್ಚು ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಲ್ಲಿ ಡೆಂಘಿ ಜ್ವರಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದ್ದು, ಉಳಿದ ಜಿಲ್ಲೆಗಳ ಜನರಲ್ಲಿ ಆತಂಕ ಹೆಚ್ಚಿದೆ. ಅವರ ನೆರವಿಗಾಗಿಯೇ ಸಹಾಯವಾಣಿ ತೆರೆಯಲಾಗಿದೆ.

ಬೆಂಗಳೂರಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅದರಿಂದ್ಲೇ ಡೆಂಘಿ ಜ್ವರ ವೇಗವಾಗಿ ಹರಡುತ್ತಿದೆ ಅಂತಾ ಇಎಂಆರ್ ಐ ಉಪ ನಿರ್ದೇಶಕ ಡಾ.ನಾರಾಯಣ ತಿಳಿಸಿದ್ದಾರೆ. ಶಂಕಿತ ಪ್ರಕರಣಗಳ ಬಗ್ಗೆ ಜನರು ಸ್ವಯಂಪ್ರೇರಿತರಾಗಿ ಮಾಹಿತಿ ನೀಡಿದ್ರೆ ಅದನ್ನು ತಡೆಗಟ್ಟಬಹುದು ಅಂತಾ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...