alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಬಿಎಂಪಿ ಮೇಯರ್ ಗೆ ಸೊಳ್ಳೆ ಪರದೆ ಗಿಫ್ಟ್..!

ಡೆಂಘಿ ಜ್ವರದ ಹಾವಳಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಹೈರಾಣಾಗಿದ್ದಾರೆ. ಆದ್ರೆ ಬಿಬಿಎಂಪಿ ಮಾತ್ರ ಸೊಳ್ಳೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೊಳ್ಳೆ ಕಾಟದ ಸಮಸ್ಯೆಯ ಜೊತೆಗೆ ಪರದೆಯನ್ನೂ ಹೊತ್ತು ಜೆಡಿಯು ಸದಸ್ಯರು ನೇರವಾಗಿ ಬಿಬಿಎಂಪಿ ಕಚೇರಿಗೇ ಬಂದಿದ್ರು.

ಸಮಸ್ಯೆ ಪರಿಹರಿಸಲು ವಿಫಲರಾದ ಬಿಬಿಎಂಪಿ ಮೇಯರ್ ಪದ್ಮಾವತಿ ಅವರಿಗೆ ಸೊಳ್ಳೆ ಪರದೆಯನ್ನು ಉಡುಗೊರೆಯಾಗಿ ತಂದಿದ್ರು. ಆದ್ರೆ ಮೇಯರ್ ಕಚೇರಿಯಲ್ಲಿ ಇರಲಿಲ್ಲ. ಕೊನೆಗೆ ತಮ್ಮ ಮೆಮೊರೆಂಡಮ್ ಜೊತೆಗೆ ಸೊಳ್ಳೆ ಪರದೆಯನ್ನು ಕೂಡ ಪದ್ಮಾವತಿ ಅವರ ಆಪ್ತ ಸಹಾಯಕರಿಗೆ ಕೊಟ್ಟು ಬಂದಿದ್ದಾರೆ.

ಜನರು ಡೆಂಘಿ ಜ್ವರದಿಂದ ತತ್ತರಿಸಿ ಹೋಗಿದ್ರೂ ಬಿಬಿಎಂಪಿ ಮಾತ್ರ ನಿದ್ದೆಯಲ್ಲಿದೆ ಅನ್ನೋದು ಅವರ ಆರೋಪ. ಸೊಳ್ಳೆ ಪರದೆ ಗಿಫ್ಟ್ ಮಾಡಿದ ಮೇಲಾದ್ರೂ ಮೇಯರ್ ಪದ್ಮಾವತಿ ಎಚ್ಚೆತ್ತುಕೊಳ್ಳಲಿ ಅಂತಾ ಹೇಳಿದ್ದಾರೆ. ಜೆಡಿಯು ಕಾರ್ಯಕರ್ತರು ಸೊಳ್ಳೆ ಪರದೆ ಹಾಕಿಕೊಂಡೇ ಬಿಬಿಎಂಪಿ ಕಚೇರಿಗೆ ಆಗಮಿಸಿದ್ದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...