alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಂಕೆ ಬೇಟೆಯಾಡಿದ್ದ ಆರೋಪಿ ಅರೆಸ್ಟ್

ಶಿವಮೊಗ್ಗ: ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಉಂಬ್ಳೇಬೈಲು ಮೀಸಲು ಅರಣ್ಯ ಪ್ರದೇಶದ ಲಕ್ಕಿನಕೊಪ್ಪ ಗ್ರಾಮದ ಸಮೀಪದಲ್ಲಿ ನಡೆದಿದೆ.

ಲಕ್ಕಿನಕೊಪ್ಪ ಗ್ರಾಮದ ವಾಸಿ ನಾಗರಾಜ (28) ಬಂಧಿತ ಆರೋಪಿ. ದೇವು, ಜಬೀವುಲ್ಲ ಸ್ಥಳದಿಂದ ಪರಾರಿಯಾಗಿದ್ದಾರೆ. ಇವರುಗಳು ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದರು.

ಜಿಂಕೆಯ ತಲೆ, ಚರ್ಮ ಹಾಗೂ ಜಿಂಕೆ ಮಾಂಸವನ್ನು ಈ ಮೂವರು ಆರೋಪಿಗಳು ಬೈಕಿನಲ್ಲಿ ಸಾಗಿಸುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ದ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...