alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ವಿಶೇಷಗಳಲ್ಲಿ ಇದು ಕೂಡಾ ಒಂದು

4567890

ದೀಪಾವಳಿ ಸಂದರ್ಭದಲ್ಲಿ ದನಗಳನ್ನು ಬೆದರಿಸುವುದು, ರೈತರ ಬಹುಮುಖ್ಯವಾದ ಭಾಗ. ದನಗಳನ್ನು ಸಿಂಗರಿಸಿ ಅದರ ಕೊರಳಿಗೆ ಹೂವುಗಳಿಂದ ಅಲಂಕಾರ ಮಾಡಿ, ಬೆಲ್ಲದ ಅಚ್ಚು, ಕೊಬ್ಬರಿ, ಬಾಳೆಹಣ್ಣು ಅಷ್ಟೇಕೆ ಬೆಲೆಬಾಳುವ ಬೆಳ್ಳಿಯನ್ನು ಕಟ್ಟಿ ಬೆದರಿಸಿದರೆ ಊರಿನ ಸಾಹಸಿ ಯುವಕರು ಅದನ್ನು ಹಿಡಿದು ಕಿತ್ತುಕೊಳ್ಳುವ ದೃಶ್ಯ ಕೇವಲ ನೆನಪುಗಳು ಅಷ್ಟೇ.

ಹೋರಿ ಬೆದರಿಸುವುದು ಎಷ್ಟೋ ಬಾರಿ ಅಪಾಯಕ್ಕೆ ತಿರುಗಿದ್ದೂ ಇದೆ. ಹಾಗಾಗಿ ದನ ಬೆದರಿಸುವುದೂ ಕೂಡ ಇತ್ತೀಚೆಗೆ ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಟ್ರಾಕ್ಟರ್ ಗಳು ಬಂದ ಮೇಲೆ ಎತ್ತುಗಳೇ ಮಾಯವಾಗಿವೆ. ದನಗಳೇ ಇಲ್ಲದ ಮೇಲೆ ಇನ್ನು ಓಡಿಸುವುದು ಎಲ್ಲಿಂದ ಬಂತು. ಇದರ ಜೊತೆಗೆ ರೈತರ ಸಂಕಷ್ಟಗಳು ಹೆಚ್ಚುತ್ತಿರುವುದು ಹಬ್ಬದ ಸಂಭ್ರಮಕ್ಕೆ ತಣ್ಣೀರೆರೆಚಿದಂತಾಗಿದೆ. ಈಗಂತೂ ಬೆಲೆಗಳೂ ಕೂಡ ಗಗನಕ್ಕೆ ಏರಿವೆ. ಬಡವರು ದೀಪಾವಳಿ ಹಬ್ಬವನ್ನು ಈ ಬೆಲೆಗಳ ಅಬ್ಬರದಲ್ಲಿ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.

ಒಂದು ಕೆಜಿ ಬೇಳೆಯ ಬೆಲೆ 120 ರೂ. ದಾಟಿದೆ. ಬೆಲ್ಲವೂ ದುಬಾರಿ, ಇನ್ನು ಹೇಗೆ ಹೋಳಿಗೆ ಮಾಡುವುದು, ಬಡವರ ಪಾಲಿಗೆ ಹಬ್ಬಗಳು ದುಬಾರಿಯಾಗುತ್ತಿರುವುದು ನಿಜಕ್ಕೂ ವಿಷಾದಕರ. ಹಾಗಾಗಿ ಈ ಹಬ್ಬಗಳು ತಮ್ಮ ಸಂಭ್ರಮವನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...