alex Certify
ಕನ್ನಡ ದುನಿಯಾ       Mobile App
       

Kannada Duniya

ಬಲು ಜೋರಾಗಿದೆ ದೀಪಾವಳಿ ಖರೀದಿ ಭರಾಟೆ

deepawali

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದೆ. ಹಬ್ಬಕ್ಕಾಗಿ ಜನ ಖರೀದಿಗೆ ಮುಂದಾಗಿದ್ದು, ಎಲ್ಲೆಡೆ ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಹೊಸ ಬಟ್ಟೆ, ಪಟಾಕಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ತೊಡಗಿರುವುದನ್ನು ಕಾಣಬಹುದಾಗಿದೆ.

ಮಾರುಕಟ್ಟೆಗೆ ವಿವಿಧ ರೀತಿಯ ಆಕರ್ಷಕ ವಿನ್ಯಾಸದ ಆಕಾಶಬುಟ್ಟಿಗಳು, ಹಣತೆಗಳು ಬಂದಿವೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಪ್ರಮುಖ ವಹಿವಾಟು ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿದ್ದು, ಬಹುತೇಕ ಎಲ್ಲಾ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ. ಆಕಾಶಬುಟ್ಟಿಗಳಂತೂ ಕಣ್ಣಿಗೆ ಹಬ್ಬ. ಪ್ಲಾಸ್ಟಿಕ್, ಪೇಪರ್, ಬಟ್ಟೆಗಳಲ್ಲಿ ತಯಾರಿಸಿದ ಆಕಾಶಬುಟ್ಟಿಗಳು, ಹಣತೆಗಳು ಮಾತ್ರವಲ್ಲ, ದೀಪಾವಳಿಗೆ ಮನೆಯ ಮುಂದೆ ಹಾಕಲು ಬಣ್ಣದ ರಂಗೋಲಿ ಪುಡಿ ಖರೀದಿ ಕೂಡ ಜೋರಾಗಿದೆ.

ದೀಪಾವಳಿಗೆ ಬಟ್ಟೆ, ಪಟಾಕಿ ಮಾತ್ರವಲ್ಲ, ಹೆಚ್ಚಿನ ಜನ ಟಿವಿ, ಮಿಕ್ಸರ್, ಗ್ರೈಂಡರ್, ರೆಫ್ರಿಜರೇಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಾಗಾಗಿ ಈ ವಸ್ತುಗಳ ವಹಿವಾಟೂ ಜೋರಾಗಿದೆ. ಒಟ್ಟಾರೆ ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ಖರೀದಿ ಜೋರಾಗಿದೆ. ಇನ್ನು ಕಾರ್ಯ ನಿಮಿತ್ತ ಪರ ಊರುಗಳಲ್ಲಿ ನೆಲೆಸಿರುವವರು ಹಬ್ಬಕ್ಕೆಂದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದು, ಬಸ್, ರೈಲು ತುಂಬಿ ತುಳುಕುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...