alex Certify
ಕನ್ನಡ ದುನಿಯಾ       Mobile App
       

Kannada Duniya

ಪಟಾಕಿ ಸಿಡಿಸುವಾಗ ಇರಲಿ ಎಚ್ಚರ

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ. ಮಕ್ಕಳಿಗಂತೂ ಪಟಾಕಿ ಎಂದರೆ ಅಚ್ಚುಮೆಚ್ಚು. ಪಟಾಕಿ ಸಿಡಿಸುವಾಗ ಸಂತಸದ ರೀತಿಯಲ್ಲೇ ಕೆಲವೊಮ್ಮೆ ಸಂಕಟದ ಸನ್ನಿವೇಶ ಸೃಷ್ಠಿಯಾಗುತ್ತದೆ.

ಅನೇಕ ಮಕ್ಕಳು ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ. ಕಣ್ಣು ಮತ್ತಿತರ ಅಂಗಗಳಿಗೆ ಹಾನಿಯಾದ ನಿದರ್ಶನಗಳಿವೆ. ಹಾಗಾಗಿ ಮಕ್ಕಳ ಕೈಗೆ ಪಟಾಕಿ ಕೊಟ್ಟು ಪೋಷಕರು ಒಳಗೆ ಇರಬಾರದು. ಮಕ್ಕಳ ಕೈಗೆ ಸಣ್ಣ ಗಾತ್ರದ, ಸಣ್ಣ ಶಬ್ಧ ಉಂಟು ಮಾಡುವ ಪಟಾಕಿಗಳನ್ನಷ್ಟೇ ಕೊಡಿ. ಜಾಸ್ತಿ ಶಬ್ಧ, ಹಾನಿ ಉಂಟು ಮಾಡುವ ಪಟಾಕಿಗಳಿಂದ ದೊಡ್ಡವರೂ ದೂರ ಇರುವುದು ಒಳಿತು. ಪಟಾಕಿ ಹಚ್ಚುವಾಗ ಸುರಕ್ಷತೆಗೆ ಒತ್ತು ನೀಡಿ.

ಪಟಾಕಿ ಸಿಡಿಸುವಾಗ ಉದ್ದನೆಯ ಬತ್ತಿಯನ್ನು ಬಳಸಿರಿ. ಕಿವಿಗೆ ಹೆಚ್ಚು ಶಬ್ಧವನ್ನು ಉಂಟುಮಾಡುವ ಪಟಾಕಿಗಳನ್ನು ಹಚ್ಚಬೇಡಿ. ವೃದ್ಧರಿಗೆ, ರೋಗಿಗಳಿಗೆ ಹೆಚ್ಚು ಶಬ್ಧ ಉಂಟು ಮಾಡುವ ಪಟಾಕಿಗಳಿಂದ ತೊಂದರೆಯಾಗಬಹುದಾದ ಸಾಧ್ಯತೆ ಇರುತ್ತದೆ. ಪಟಾಕಿ ಹಚ್ಚುವ ಸಂದರ್ಭದಲ್ಲಿ ಸಮೀಪದಲ್ಲೇ ನೀರು ಇಟ್ಟುಕೊಂಡಿರಿ. ಅನಾಹುತವಾದ ಬಳಿಕ ನೀರು ಹುಡುಕುವ ಬದಲು ಮುಂಜಾಗ್ರತೆ ಕ್ರಮ ವಹಿಸುವುದು ಒಳಿತು.

ಕಣ್ಣು, ಮೈ ಕೈಗೆ ತಾಗದಂತೆ ದೂರದಿಂದಲೇ ಪಟಾಕಿ ಹಚ್ಚಿರಿ. ಸುರಕ್ಷತೆ ಬಗ್ಗೆ ಒತ್ತು ನೀಡಿ. ಮಕ್ಕಳಿಗೆ ಸುಲಭವಾಗಿ ಹಚ್ಚುವ ಪಟಾಕಿಗಳನ್ನು ಮಾತ್ರ ಕೊಡಿ. ರಾಕೆಟ್ ಮೊದಲಾದ ಪಟಾಕಿಗಳನ್ನು ಹಚ್ಚುವ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿರಿ. ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ಸಂಭ್ರಮದ ಜೊತೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಿರಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...