alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದಲ್ಲಿ ಕಡಿಮೆಯಾಗಿದೆ ಪಟಾಕಿಗಳ ಸದ್ದು…!

ದೀಪಾವಳಿಯಲ್ಲಿ ಪಟಾಕಿಗಳದ್ದು ಮೇಲುಗೈ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಶಬ್ದವಿಲ್ಲದೇ ಹಬ್ಬ ಆಚರಿಸಿ, ದೀಪಗಳನ್ನು ಮಾತ್ರ ಹಚ್ಚಿರಿ ಎಂಬ ಕಾರಣದಿಂದ ಪಟಾಕಿಗಳನ್ನು ಸಿಡಿಸುವುದು ಕಡಿಮೆಯಾಗಿವೆ. ಆದರೂ ಮಕ್ಕಳ, ಯುವಕರ ಉತ್ಸಾಹಕ್ಕೆ ಕೊರತೆಯೇನೂ ಇಲ್ಲ ಎನ್ನಬಹುದು.

ಏನೇ ಮಾಡಿದರೂ ದೀಪಾವಳಿಯಲ್ಲಿ ಪಟಾಕಿಯನ್ನು ಹೊಡೆದೇ ತೀರುತ್ತಾರೆ. ಆದರೆ ಬಹಳ ಎಚ್ಚರಿಕೆ ಅಗತ್ಯ ಎನ್ನುವುದು ಕೂಡ ಅಷ್ಟೇ ಸತ್ಯ. ಏಕೆಂದರೆ ಪ್ರತಿ ಬಾರಿ ಹಬ್ಬಗಳಲ್ಲಿ ಪಟಾಕಿ ಸಿಡಿಸಿ ಮಕ್ಕಳು, ದೊಡ್ಡವರು ಕಣ್ಣನ್ನೇ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ.

ಕೆಲವು ದಶಕಗಳ ಹಿಂದೆ ಪಟಾಕಿಗಳ ರೀತಿಯೇ ಬೇರೆ ಇತ್ತು. ಬೆಳ್ಳುಳ್ಳಿ ತರದ ಪಟಾಕಿ, ಚಿನಕುರಳಿ, ಸಣ್ಣ ಪಿಸ್ತೂಲು, ಹಾವಿನ ಗುಳಿಗೆ, ಲಕ್ಷ್ಮಿ ದಡಾಕಿ, ನೆಲಚಕ್ರ, ಸುರ್ ಸುರ್ ಬತ್ತಿ, ಮತಾಪು, ಹನುಮಂತನ ಬಾಲ ಹೀಗೆ ಇವು ಅಷ್ಟೇನೂ ತೊಂದರೆ ಕೊಡುವಂತಹವೇನೂ ಅಲ್ಲ.

ಆದರೆ ಆಕಾಶ ಬಾಣ, ದೊಡ್ಡ ದೊಡ್ಡ ಶಬ್ದ ಮಾಡುವ ಬಹುದೊಡ್ಡ ಪಟಾಕಿಗಳು ಇವೆಲ್ಲ ಒಂದಿಷ್ಟು ಅಪಾಯಕಾರಿಗಳೇ. ಶಬ್ದ ಮಾಲಿನ್ಯವೂ ಸೇರಿ ಹೊಗೆಯಿಂದ ಪರಿಸರಕ್ಕೂ ಕೂಡ ಹಾನಿಯಾಗುತ್ತದೆ ಎಂಬ ದೃಷ್ಟಿಯಲ್ಲಿ ಶಬ್ದರಹಿತ ದೀಪಾವಳಿ ಹಬ್ಬಕ್ಕೆ ಇತ್ತೀಚೆಗೆ ಒತ್ತು ನೀಡಲಾಗುತ್ತಿದೆ. ಅಲ್ಲದೇ ದುಬಾರಿ ದರವೂ ಕೂಡಾ ಪಟಾಕಿ ಖರೀದಿ ಕಡಿಮೆಯಾಗಲು ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...