alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಮನ ಕಲಕುತ್ತೆ ಕಾರವಾರದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ

ಕಾರವಾರದಲ್ಲಿ ನಡೆದಿರುವ ಘಟನೆಯೊಂದು ಎಲ್ಲರ ಮನಕಲಕುತ್ತದೆ. ಪಾರ್ಶ್ವವಾಯು ಪೀಡಿತ ಪತಿ, ಪತ್ನಿ ತನ್ನ ಕಣ್ಣೆದುರಲ್ಲೇ ಸಾವನ್ನಪ್ಪಿದರೂ ಸ್ಪಂದಿಸಲಾಗದೆ ವಾರಗಳ ಕಾಲ ಶವದ ಜೊತೆ ಕಾಲ ಕಳೆದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕಾರವಾರದ ಕೆ ಎಚ್ ಬಿ ಕಾಲೋನಿ ಯಲ್ಲಿ ಈ ಘಟನೆ ನಡೆದಿದ್ದು, ಪಾರ್ಶ್ವವಾಯು ಪೀಡಿತರಾಗಿದ್ದ ಆನಂದ್ ಮಡಿವಾಳ, ಪತ್ನಿಯ ದುಡಿಮೆ ಮೇಲೆಯೇ ಅವಲಂಬಿತರಾಗಿದ್ದರು. ಇವರ ಪತ್ನಿ ಗಿರಿಜಾ ಮಡಿವಾಳ ಸ್ಥಳೀಯರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.

ಮಕ್ಕಳಿರದ ಈ ದಂಪತಿ, ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದು, ವಾರದ ಹಿಂದೆ ಪತಿ ಮುಂದೆಯೇ ಗಿರಿಜಾ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಇದನ್ನು ಯಾರ ಬಳಿಯೂ ಹೇಳದ ಅಸಹಾಯಕ ಸ್ಥಿತಿಯಲ್ಲಿದ್ದ ಆನಂದ್ ಮಡಿವಾಳ ಊಟ-ತಿಂಡಿಯೂ ಇಲ್ಲದೆ ವಾರ ಕಳೆದಿದ್ದಾರೆ.

ವಾರ ಕಳೆದರೂ ಗಿರಿಜಾ ಮನೆ ಕೆಲಸಕ್ಕೆ ಬಾರದ ಕಾರಣ ಹುಡುಕಿಕೊಂಡು ಬಂದವರೊಬ್ಬರು ಈ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬರಲು ಕಾರಣವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...