alex Certify
ಕನ್ನಡ ದುನಿಯಾ       Mobile App
       

Kannada Duniya

ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಅಧಿಕಾರಿ…!

ಸರ್ಕಾರಿ ಸೇವೆಯಲ್ಲಿರುವ ಕೆಲ ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣವೇ ಒಂದು ಸ್ಪಷ್ಟ ಉದಾಹರಣೆ. ತಂದೆಯ ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿ ಹೆಸರಿನಲ್ಲೇ ಅಧಿಕಾರಿ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಭಾರಿ ಲೋಪವೆಸಗಿದ್ದಾನೆ.

ಇಂಥದೊಂದು ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕ ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದ್ದು, ರಾಮೇಗೌಡ ಎಂಬ ರೈತ, ತಮ್ಮ ತಂದೆ ತಿಮ್ಮೇಗೌಡ ಮೃತಪಟ್ಟಿದ್ದ ಮರಣ ಪ್ರಮಾಣ ಪತ್ರ ಪಡೆಯಲು ಅರಕೆರೆ ನಾಡಕಛೇರಿಗೆ ಅರ್ಜಿ ಸಲ್ಲಿಸಿದ್ದ ವೇಳೆ ಈ ಪ್ರಮಾದ ನಡೆದಿದೆ.

ತಿಮ್ಮೇಗೌಡರ ಮರಣ ಪ್ರಮಾಣ ಪತ್ರದ ಜೊತೆಗೆ ಬದುಕಿರುವ ಅವರ ಪುತ್ರ ರಾಮೇಗೌಡರ ಮರಣ ಪ್ರಮಾಣ ಪತ್ರವನ್ನೂ ಅಧಿಕಾರಿಗಳು ನೀಡಿದ್ದು, ಇದರಿಂದಾಗಿ ಅವರು ಕಂಗಾಲಾಗಿದ್ದಾರೆ. ಇದೀಗ ರಾಮೇಗೌಡರು ತಾವು ಬದುಕಿರುವ ಕುರಿತು ಪುರಾವೆ ಒದಗಿಸುವ ಅನಿವಾರ್ಯತೆ ಒದಗಿ ಬಂದಿದ್ದು, ಅಧಿಕಾರಿಗಳು ಮಾಡಿರುವ ಲೋಪದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...