alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸುವ ಔಷಧದಿಂದ ಸೈಡ್ ಎಫೆಕ್ಟ್, ಹಾರಿಹೋಯ್ತು ಪ್ರಾಣ

fat

ಬೆಂಗಳೂರು: ಆಧುನಿಕ ಜೀವನ ಶೈಲಿ, ದೈಹಿಕ ಶ್ರಮವಿಲ್ಲದ ಕೆಲಸ, ಆಹಾರ ಪದ್ಧತಿ ಇವೇ ಮೊದಲಾದ ಕಾರಣಗಳಿಂದ ಚಿಕ್ಕ ವಯಸ್ಸಿಗೆ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ.

ಹೀಗೆ ಬೊಜ್ಜು ಕರಗಿಸಲು ಹೋಗಿ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಗಂಗರಾಜ್ ಅಲಿಯಾಸ್ ರವಿ ಮೃತಪಟ್ಟವರು. ಅವರು ತಮಗೆ ಹೆಚ್ಚಿನ ತೂಕವಿದೆ ಎಂದು ಭಾವಿಸಿ ತೂಕ ಇಳಿಸಿಕೊಳ್ಳಲು ಯೋಜಿಸಿದ್ದಾರೆ. 15 ದಿನಗಳಿಂದ ಗಂಗರಾಜ್ ಫ್ಯಾಟ್ ಕಡಿಮೆ ಮಾಡುವ ಪೌಡರ್ ಸೇವಿಸಿದ್ದಾರೆ. ಇದನ್ನು ಸೇವಿಸಿದ ನಂತರದಲ್ಲಿ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಆಸ್ಪತ್ರೆ ಸೇರಿದ್ದಾರೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ತೂಕ ಇಳಿಸಿಕೊಳ್ಳಲು ಸೇವಿಸಿದ ಔಷಧದಿಂದ ಅಡ್ಡ ಪರಿಣಾಮ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...