alex Certify
ಕನ್ನಡ ದುನಿಯಾ       Mobile App
       

Kannada Duniya

ಭದ್ರತಾ ಸಿಬ್ಬಂದಿಯಿಂದಲೇ ಶೂ ಸ್ವಚ್ಚ ಮಾಡಿಸಿಕೊಂಡ ಡಿಸಿಎಂ

ಬೆಂಗಳೂರು: ಗುಲಾಮಗಿರಿ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆಗಳನ್ನು ನೀಡುತ್ತಿದ್ದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಈಗ ಸ್ವತಃ ಭದ್ರತಾ ಸಿಬ್ಬಂದಿಯಿಂದಲೇ ತಮ್ಮ ಬಟ್ಟೆ, ಶೂ ಗಳನ್ನು ಕರ್ಚೀಫ್ ನಿಂದ ಸ್ವಚ್ಛ ಮಾಡಿಸಿಕೊಂಡಿರುವ ಘಟನೆ ನಡೆದಿದೆ.

ಡಿಸಿಎಂ ಪರಮೇಶ್ವರ್ ಅವರು ನಗರದ ಅಭಿವೃದ್ಧಿ ಪರೀಶೀಲನೆ ಹಿನ್ನಲೆಯಲ್ಲಿ ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ರಾಜಕಾಲುವೆ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಅವರ ಬಟ್ಟೆ ಹಾಗೂ ಶೂಗಳ ಮೇಲೆ ರಸ್ತೆಯ ಕೆಸರು ಸಿಡಿದಿದೆ. ತಕ್ಷಣ ಭದ್ರತಾ ಸಿಬ್ಬಂದಿಯನ್ನು ಕರೆದು ಅದನ್ನು ಕ್ಲೀನ್ ಮಾಡುವಂತೆ ಸೂಚಿಸಿದ್ದಾರೆ. ಡಿಸಿಎಂ ಆದೇಶದಂತೆ ಗನ್ ಮ್ಯಾನ್ ತನ್ನ ಕರವಸ್ತ್ರದಿಂದಲೇ ಪರಮೇಶ್ವರ್​ ಅವರ ಬಟ್ಟೆ, ಶೂಗಳನ್ನು ಕ್ಲೀನ್ ಮಾಡಿದ್ದಾರೆ.

ಪರಮೇಶ್ವರ್ ರವರ ಈ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಿಂದೆ ಆರ್ಡರ್ಲಿ ಪದ್ಧತಿ ವಿರೋಧಿಸುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದ ಪರಮೇಶ್ವರ್, ಈಗ ತಾವು ಅಧಿಕಾರಕ್ಕೆ ಬಂದ ಮೇಲೆ ಅದೇ ಪದ್ಧತಿಯನ್ನು ಮೆರೆದಿದ್ದಾರೆ. ಅಲ್ಲದೇ ಜನಸಾಮಾನ್ಯರು ದಿನಂಪ್ರತಿ ಅನುಭವಿಸುತ್ತಿರುವ ಸಮಸ್ಯೆಗಳಿಗಿಂತ ಉಪ ಮುಖ್ಯಮಂತ್ರಿಗಳಿಗೆ ತಮ್ಮ ಬಟ್ಟೆಯ ಮೇಲೆ ಸಿಡಿದ ಕೆಸರು ನೀರು ಸ್ವಚ್ಛ ಮಾಡಿಸಿಕೊಳ್ಳುವುದೇ ಮುಖ್ಯವಾಯಿತೇ ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...