alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಬೋಳಿಸಿಕೊಂಡಿದ್ರೂ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ

criminal-identity-theft-site

ಬೆಂಗಳೂರಿನ ಜ್ಯುವೆಲರಿ ಅಂಗಡಿಯೊಂದಕ್ಕೆ ಕನ್ನಹಾಕಿ ವೇಷ ಮರೆಸಿಕೊಂಡು ಧಾರವಾಡದಲ್ಲಿ ಓಡಾಡುತ್ತಿದ್ದ ಕಳ್ಳನನ್ನು ಪೊಲಿಸರು ಬಂಧಿಸಿದ್ದಾರೆ. 32 ವರ್ಷದ ಮೊಹಮ್ಮದ್ ಹುಸೇನ್ ಮೂಲತಃ ಅಹಮದಾಬಾದ್ ನವನು. 20 ದಿನಗಳ ಹಿಂದೆ ಬೆಂಗಳೂರಿನ ಕಾಟನ್ ಪೇಟೆಗೆ ಬಂದಿದ್ದ.

ಜ್ಯುವೆಲರಿ ಅಂಗಡಿಯೊಂದರ ಮೇಲ್ಭಾಗದಲ್ಲೇ ಇದ್ದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ. ಪ್ಲಾಟಿನಂ ಲಾಡ್ಜ್ ನೆಲಮಾಳಿಗೆಯಲ್ಲಿದ್ರೆ, ಕಳ್ಳ ಉಳಿದುಕೊಂಡಿದ್ದ ಲಾಡ್ಜ್ ಮೇಲ್ಭಾಗದಲ್ಲಿತ್ತು. ಭಾನುವಾರ ರಾತ್ರಿ ಅಂಗಡಿಗೆ ಕನ್ನ ಹಾಕಿದ ಖದೀಮ, ಅಲ್ಲಿದ್ದ ಆಭರಣಗಳನ್ನೆಲ್ಲ ಮೂಟೆ ಕಟ್ಟಿದ್ದ.

ಎಲ್ಲವನ್ನೂ ತೆಗೆದುಕೊಂಡು ಬೆಳಗ್ಗೆ 6.30ಕ್ಕೆ ಲಾಡ್ಜ್ ನಿಂದ ಹೊರಟು ಕೆ ಎಸ್ ಆರ್ ಟಿ ಸಿ ಬಸ್ ಏರಿ ಧಾರವಾಡಕ್ಕೆ ಹೋಗಿದ್ದಾನೆ. ಅಲ್ಲೂ ಲಾಡ್ಜ್ ಕೋಣೆಯನ್ನು ಬಾಡಿಗೆಗೆ ಪಡೆದು, ನಂತರ ಸಲೂನ್ ಗೆ ತೆರಳಿ ತಲೆ ಬೋಳಿಸಿಕೊಂಡಿದ್ದಾನೆ. ಅಂದು ಸಂಜೆ 7.45ರ ವೇಳೆಗೆ ಕಳ್ಳ ಹುಬ್ಬಳಿಯತ್ತ ಹೊರಟಿದ್ದ.

ತಲೆ ಬೋಳಿಸಿರೋದ್ರಿಂದ ಹೊಸ ಅವತಾರದಲ್ಲಿ ಪೊಲೀಸರು ತನ್ನನ್ನು ಪತ್ತೆ ಮಾಡುವುದು ಅಸಾಧ್ಯ ಅನ್ನೋದು ಅವನ ನಂಬಿಕೆ. ಆದ್ರೆ ಕಿತ್ತೂರು ಬಳಿ ಅವನನ್ನು ಹಿಡಿದ ಪೊಲೀಸರು 1.3 ಕೆಜಿ ಚಿನ್ನ ಹಾಗೂ 14 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿ ಟಿವಿಯಲ್ಲಿ ಕಳ್ಳತನ ದೃಶ್ಯ ಪರಿಶೀಲಿಸಿದ ಪೊಲಿಸರು ಆತನ ಫೋಟೋವನ್ನು ಎಲ್ಲಾ ಕಡೆ ಅಂಟಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದ್ರು. ಬಸ್ ಚಾಲಕ ಆತ ಧಾರವಾಡಕ್ಕೆ ಬಂದಿರೋದಾಗಿ ಮಾಹಿತಿ ಕೊಟ್ಟಿದ್ದ. ನಂತರ ಅಲ್ಲಿಂದ ಅಹಮದಾಬಾದ್ ಗೆ ಹೊರಟಿರೋದು ಗೊತ್ತಾಗ್ತಿದ್ದಂತೆ ಅಲರ್ಟ್ ಆದ ಪೊಲೀಸರು ಆತನನ್ನು ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...