alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಗಳ ಗುಂಡು-ತುಂಡು ಪಾರ್ಟಿ

ದಾವಣಗೆರೆ: ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಅಂತಾರೆ. ಆದರೆ ಅಧಿಕಾರಿಗಳು ಸರ್ಕಾರಿ ಕಛೇರಿಯಲ್ಲೇ ಗುಂಡು-ತುಂಡು ಪಾರ್ಟಿ ಮಾಡಿರುವುದು ದಾವಣಗೆರೆ ನಗರದಲ್ಲಿ ಬೆಳಕಿಗೆ ಬಂದಿದೆ.

ಕೋರ್ಟ್ ಪಕ್ಕದಲ್ಲಿಯೇ ಇರುವ ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿಯಲ್ಲಿಯೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಈ ಪಾರ್ಟಿ ಆಯೋಜನೆ ಮಾಡಲಾಗಿದೆ. ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿಗಳು ಈ ಪಾರ್ಟಿಯ ಮೋಜು-ಮಸ್ತಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಸರ್ಕಾರಿ ಕಛೇರಿಯನ್ನೇ ಬಾರ್ ಆಂಡ್ ರೆಸ್ಟೋರೆಂಟ್ ರೀತಿ ಪಾರ್ಟಿ ಮಾಡಲು ಬಳಸಿದ್ದಕ್ಕೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಅವರಿಂದ ಬಂದ ಉದ್ಧಟತನದ ಉತ್ತರ ಕೇಳಿದ್ರೆ ಶಾಕ್ ಆಗುತ್ತೆ. ’ಆಷಾಡ ಮಾಸದ ಹಿನ್ನಲೆಯಲ್ಲಿ ಅಧಿಕಾರಿಗಳು ಇಲ್ಲಿಗೆ ಬಂದು ಗುಂಡು-ತುಂಡಿನ ಪಾರ್ಟಿ ಮಾಡಿದ್ದಾರೆ. ಸರ್ಕಾರಿ ಕಛೇರಿಯಲ್ಲಿ ಗುಂಡು-ತುಂಡು ತಿನ್ನಬಾರದೇ…?’ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಜನಸಾಮಾನ್ಯರ ಅನುಕೂಲಕ್ಕಾಗಿ ನಿರ್ಮಿಸಿರುವ ಸರ್ಕಾರಿ ಕಛೇರಿಯಲ್ಲೇ ಅಲ್ಲಿನ ಅಧಿಕಾರಿಗಳು ಈ ಪಾರ್ಟಿ ಮಾಡಿ, ಅನಾಚಾರ ಮೆರೆಯುತ್ತಿರುವಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಎಂಬುದು ಜನತೆ ಪ್ರಶ್ನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...