alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿ ಕೈಕೊಟ್ಟಿದ್ದ ಪೊಲೀಸ್, ಪೊಲೀಸರ ಸಮ್ಮುಖದಲ್ಲೇ ಮದುವೆ

ದಾವಣಗೆರೆ: ಪ್ರೀತಿಸಿ ಯುವತಿಗೆ ಕೈಕೊಟ್ಟಿದ್ದ ಪೊಲೀಸ್ ಒಬ್ಬರು ಪೊಲೀಸರ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಕುಂಸಿ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಹಾಗೂ ಮಂಜುಳಾ ಅವರು ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರ್ಷದ ಹಿಂದಿನಿಂದ ಹರಪನಹಳ್ಳಿ ತಾಲ್ಲೂಕಿನ ಮಂಜುನಾಥ್ ಹಾಗೂ ಮಂಜುಳಾ ಪ್ರೀತಿಸಿದ್ದು, ಇತ್ತೀಚೆಗೆ ಮದುವೆಯಾಗಲು ನಿರಾಕರಿಸಿ ಮಂಜುನಾಥ್ ದೂರವಾಗಿದ್ದಾರೆ. ಇದರಿಂದ ಕಂಗಾಲಾದ ಮಂಜುಳಾ ಪೊಲೀಸರ ಮೊರೆ ಹೋಗಿದ್ದು, ಸಂಘಟನೆಯೊಂದರ ಕಾರ್ಯಕರ್ತರ ನೆರವಿನಿಂದ ಮದುವೆ ಮಾಡಿಸಲಾಗಿದೆ.

ಹರಿಹರೇಶ್ವರ ದೇವಾಲಯಲ್ಲಿ ಪೊಲೀಸರು, ಬಂಧುಗಳು ಮತ್ತು ಸಂಘಟನೆಯ ಕಾರ್ಯಕರ್ತರ ಸಮ್ಮುಖದಲ್ಲಿ ಮಂಜುನಾಥ್ ಹಾಗೂ ಮಂಜುಳಾ ಅವರ ಮದುವೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...