alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧದ ನಡುವೆಯೂ ದುಗ್ಗಮ್ಮನಿಗೆ ಕೋಣ ಬಲಿಕೊಟ್ಟ ಭಕ್ತರು

ದಾವಣಗೆರೆ: ನಗರ ದೇವತೆ ದುಗ್ಗಮ್ಮನ(ದುರ್ಗಾಂಬಿಕಾ ದೇವಿ) ಜಾತ್ರೆಗೆ ಜನಸಾಗರವೇ ಹರಿದುಬಂದಿದ್ದು, ಮಂಗಳವಾರದಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ಆರಂಭವಾಗಿವೆ.

ಜಿಲ್ಲಾಡಳಿತದಿಂದ ಜಾತ್ರೆಯಲ್ಲಿ ದೇವಸ್ಥಾನದ ಬಳಿ ಕೋಣ ಬಲಿ ನಿಷೇಧಿಸಲಾಗಿದ್ದು, ಸಿರಿಂಜ್ ನಲ್ಲಿ ರಕ್ತವನ್ನು ಸಂಗ್ರಹಿಸಿ ವಿಧಿ ವಿಧಾನ ನೆರವೇರಿಸುವಂತೆ ತಿಳಿಸಲಾಗಿದೆ.

ಆದರೆ, ಜಿಲ್ಲಾಡಳಿತದ ನಿಷೇಧದ ನಡುವೆಯೂ ಭಕ್ತರು ಕೋಣವನ್ನು ದೇವಿಗೆ ಬಲಿಕೊಟ್ಟಿದ್ದಾರೆ. ರುಂಡವನ್ನು ಹಿಡಿದು ದೇವಾಲಯದ ಸುತ್ತ ಸುತ್ತಿದ್ದಾರೆ. ಜಿಲ್ಲಾಡಳಿತ ನಿಷೇಧದ ನಡುವೆಯೂ ಪೊಲೀಸರ ಕಣ್ತಪ್ಪಿಸಿ ಧಾರವಾಡದಿಂದ ತರಲಾಗಿದ್ದ ಕೋಣವನ್ನು ಬಲಿ ಕೊಡಲಾಗಿದೆ. ಬೆಳಗಿನ ಜಾವ ಮಹಿಳೆಯರು, ಮಕ್ಕಳು ಬೇವಿನುಡುಗೆ, ಉರುಳುಸೇವೆ ಮಾಡಿ ಹರಕೆ ತೀರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...