alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಕಟರ್ ಬಳಸಿ ಎ.ಟಿ.ಎಂ.ನಲ್ಲಿ ದರೋಡೆ

dvg-axis-ban

ದಾವಣಗೆರೆ: ಎ.ಟಿ.ಎಂ.ನಲ್ಲಿದ್ದ 5 ಲಕ್ಷ ರೂಪಾಯಿಯನ್ನು ಖದೀಮರು ದೋಚಿದ ಘಟನೆ ದಾವಣಗೆರೆಯ ಜಯದೇವ ವೃತ್ತದಲ್ಲಿ ನಡೆದಿದೆ.

ಆಕ್ಸಿಸ್ ಬ್ಯಾಂಕ್ ಗೆ ಸೇರಿದ ಎ.ಟಿ.ಎಂ.ಗೆ ನುಗ್ಗಿದ ದುಷ್ಕರ್ಮಿಗಳು, ಮೊದಲಿಗೆ ಸಿ.ಸಿ. ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಗ್ಯಾಸ್ ಕಟರ್ ಮೂಲಕ ಯಂತ್ರವನ್ನು ಕಟ್ ಮಾಡಿದ್ದಾರೆ.

ಅದರಲ್ಲಿದ್ದ 5 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ. ಸೆಕ್ಯೂರಿಟಿ ಇಲ್ಲದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ಹಣ ದೋಚಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...