alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಮನ ಕಲಕುತ್ತೆ ಈ ಇಬ್ಬರು ಹೆಣ್ಣು ಮಕ್ಕಳ ಕಥೆ

ಕುಶಾಲನಗರ: ಅಪ್ಪ-ಅಮ್ಮ ಮಾಡಿದ ಸಾಲದಿಂದ ಸಂಕಷ್ಟಕ್ಕೀಡಾಗಿರುವ ಇಬ್ಬರು ಹೆಣ್ಮಕ್ಕಳು ಸಾಲಗಾರರ ಕಿರುಕುಳದಿಂದ ತಮಗೆ ರಕ್ಷಣೆ ನೀಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ ಮಾದಲಪುರ ಗ್ರಾಮದ ಪ್ರೀತಿ ಮತ್ತು ಕೀರ್ತಿ ಎಂಬ ಇಬ್ಬರು ಹೆಣ್ಮಕ್ಕಳು ಇಂದು ಅಪ್ಪ-ಅಮ್ಮ ಮಾಡಿರುವ ತಪ್ಪಿಗೆ ಸಂಕಷ್ಟಗಳಿಗೆ ಸಿಲುಕಿ ಕಣ್ಣೀರಿಡುತ್ತಿದ್ದಾರೆ. ಮಾದಲಾಪುರ ಗ್ರಾಮದ ಯೇಸು ಹಾಗೂ ಜ್ಯೋತಿ ಎಂಬ ದಂಪತಿ ಮಕ್ಕಳಾದ ಪ್ರೀತಿ 8ನೇ ತರಗತಿಯಲ್ಲಿ ಓದುತ್ತಿದ್ದರೆ, ಕೀರ್ತಿ 10 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದರೆ ಅಪ್ಪ-ಅಮ್ಮ ಮಾಡಿದ ಸಾಲದ ಸಂಕಷ್ಟಕ್ಕೆ ಈ ಇಬ್ಬರೂ ಮಕ್ಕಳು ಇಂದು ರಕ್ಷಣೆಗಾಗಿ ಮೊರೆಯಿಡುವ ಸ್ಥಿತಿ ಬಂದಿದೆ.

ತಂದೆ ಯೇಸು ಲಾರಿ ಡ್ರೈವರ್ ಆಗಿ ಸಂಸಾರದ ನೊಗ ಹೊತ್ತಿದ್ದ. ಅಲ್ಲಿ ಇಲ್ಲಿ ಸಾಲಗಳನ್ನೂ ಮಾಡಿಕೊಂಡಿದ್ದ. ಆದರೆ ಯೇಸು ಅಕಾಲ ಮರಣ ಹೊಂದಿ ಇಹಲೋಕ ತ್ಯಜಿಸಿದ್ದ. ಪರಿಣಾಮ ಸಂಸಾರದ ಜವಾಬ್ದಾರಿ ಜೊತೆಗೆ ಪತಿ ಮಾಡಿದ ಸಾಲವನ್ನು ತೀರಿಸುವ ಹೊಣೆ ಜ್ಯೋತಿ ಮೇಲೆ ಬಿತ್ತು.

ಅದರ ಜೊತೆಗೆ ಜೀವನ ಸಾಗಿಸಲು ಆಕೆಯೂ ಇನ್ನಷ್ಟು ಸಾಲ ಮಾಡಿದ್ದರು. ಬಳಿಕ ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಹೆತ್ತ ಮಕ್ಕಳನ್ನೇ ಬಿಟ್ಟು ಜ್ಯೋತಿ ನಾಪತ್ತೆಯಾಗಿದ್ದಾಳೆ. ಇದರಿಂದ ಇಂದು ಆಕೆಯ ಇಬ್ಬರು ಮಕ್ಕಳು ಸಾಲಗಾರರ ಕಾಟ, ಕಿರುಕುಳಗಳಿಗೆ ಒಳಗಾಗಿದ್ದು, ಬೇಸತ್ತ ಮಕ್ಕಳಿಬ್ಬರೂ ಕುಶಾಲನಗರ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಸಾಲಗಾರರ ಕಿರುಕುಳದಿಂದ ತಮಗೆ ರಕ್ಷಣೆ ನೀಡುವಂತೆ ಅಂಗಲಾಚಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...