alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಶಾಲೆಗಳಿಗೆ ನೀಡಿದ್ದ ದಸರಾ ರಜೆಗೆ ಕತ್ತರಿ

ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡಕ್ಕೆ ಈ ಬಾರಿ ದಸರೆಯ ಸಂದರ್ಭದಲ್ಲಿ ಹೆಚ್ಚಿನ ರಜೆ ಘೋಷಣೆ ಮಾಡಿಲ್ಲ. ಬದಲಾಗಿ ಘೋಷಣೆ ಮಾಡಿರುವ ರಜೆಯಲ್ಲೇ ಒಂದಷ್ಟು ದಿನಗಳನ್ನ ಕಟ್ ಮಾಡಿದೆ. ಇದರಿಂದ ದಸರೆಯ ಸಂದರ್ಭದಲ್ಲಿ ಹೆಚ್ಚಿನ ರಜೆಯ ಮಜಾ ಅನುಭವಿಸುವ ಅವಕಾಶ ಶಾಲಾ ವಿದ್ಯಾರ್ಥಿಗಳ ಪಾಲಿಗೆ ಈ ಬಾರಿ ಇಲ್ಲವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡದ ಎಲ್ಲಾ ತಾಲ್ಲೂಕು ಕೇಂದ್ರಗಳ ಶಾಲೆಗಳಿಗೆ ನಿರ್ದೇಶನ ಜಾರಿ ಮಾಡಿದೆ. ಶಿಕ್ಷಣ ಇಲಾಖೆಯ ಕಾನೂನಿನ ಪ್ರಕಾರ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 240 ದಿನಗಳ ಕಾಲ ಕಡ್ಡಾಯವಾಗಿ ಶಾಲೆ ನಡೆಸಬೇಕು. ಇದರಲ್ಲಿ 20 ದಿನಗಳ ವಿನಾಯಿತಿ ಪ್ರತಿ ಶಾಲೆಗಳಿಗಿರುತ್ತೆ. ಆದ್ರೆ ಈ ಬಾರಿ ದಕ್ಷಿಣ ಕನ್ನಡದಲ್ಲಿ ಸುರಿದಂತ ಧಾರಾಕಾರ ಮಳೆಯ ಕಾರಣ ಶಿಕ್ಷಣ ಇಲಾಖೆ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಸತತ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಲಯ 9 ದಿನಗಳ ಕಾಲ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿತ್ತು.

ಈ ರಜೆಯ ಅವಧಿಯನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಈಗ ದಸರೆಯ ರಜೆಯೊಂದಿಗೆ ಸರಿದೂಗಿಸುವ ಪ್ರಯತ್ನ ನಡೆಸಿದೆ. ಹಾಗಾಗಿ ಈ ಬಾರಿ ಅಕ್ಟೋಬರ್ 7ರಿಂದ 21ರವರೆಗೆ ನಿಗದಿಯಾಗಿದ್ದ ದಸರಾ ಹಬ್ಬದ ರಜೆಯನ್ನ ಒಂದು ವಾರಗಳ ಕಾಲ ಕಟ್ ಮಾಡಿದೆ. ಈ ಹಿಂದೆ ಹೊರಡಿಸಿದ್ದ ಆದೇಶವನ್ನ ರದ್ದುಗೊಳಿಸಿ ಅಕ್ಟೋಬರ್ 14ರಿಂದ ಅಕ್ಟೋಬರ್ 21ರವರೆಗೆ ದಸರೆಯ ರಜೆಯನ್ನ ಘೋಷಿಸಿದೆ.

ಇದರಲ್ಲಿ ಎರಡು ಭಾನುವಾರಗಳು ಸೇರಿರೋದ್ರಿಂದ ಒಟ್ಟು 9 ದಿನಗಳಷ್ಟೇ ವಿದ್ಯಾರ್ಥಿಗಳಿಗೆ ರಜೆ ಸಿಕ್ಕಂತಾಗಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲ್ಲೂಕುಗಳು ಮಳೆಯ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ರಜೆಯ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದಾದ ಅವಕಾಶವನ್ನ ಪಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...